ನಮಸ್ಕಾರ ಸ್ನೇಹಿತರೇ, ನೀವು ಅಥವಾ ನಿಮ್ಮ ಮನೆಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವವರು ಇದ್ದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲೈಫ್ ಗುಡ್ ಸ್ಕಾಲರ್ ಶಿಪ್ ಯೋಜನೆ – 2024 ಅಡಿಯಲ್ಲಿ ₹1,00,000 ವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ ನೀಡಲಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇವು

ಸ್ಕಾಲರ್ ಶಿಪ್ ವಿವರ:
- ವಿದ್ಯಾರ್ಥಿವೇತನದ ಹೆಸರು: ಲೈಫ್ ಗುಡ್ ಸ್ಕಾಲರ್ ಶಿಪ್ ಪ್ರೋಗ್ರಾಮ್ – 2024
- ವಿದ್ಯಾರ್ಥಿವೇತನದ ಮೊತ್ತ: ₹1,00,000 ವರೆಗೆ (ಒಂದು ವರ್ಷಕ್ಕೆ)
ಅರ್ಹತೆಗಳು:
- ಪದವಿ/ಪಿಜಿ ವಿದ್ಯಾರ್ಥಿಗಳು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
- ಅಂಕ ಮಿತಿ:
- ಪದವಿ 1ನೇ ವರ್ಷದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಇತರೆ ವರ್ಷಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
- ಆಯ್ದ ಕಾಲೇಜುಗಳು: ಸ್ಕಾಲರ್‌ಶಿಪ್ ಕೆಲವು ಆಯ್ದ ಕಾಲೇಜುಗಳಿಗೆ ಮಾತ್ರ ಲಭ್ಯವಿದೆ.
- ಆದಾಯ ಮಿತಿ: ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷ ದಾಟಿರಬಾರದು.
- ಅನರ್ಹತೆ: LG Electronics ನ ಸಿಬ್ಬಂದಿಯ ಮಕ್ಕಳು ಅರ್ಜಿ ಹಾಕಲು ಅರ್ಹರಲ್ಲ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಪದವಿ/ಪಿಜಿ ಪ್ರವೇಶದ ದಾಖಲೆ
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್‌ಬುಕ್
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಕೆ:
- ಅರ್ಜಿ ಸಲ್ಲಿಸುವ ಲಿಂಕ್: LIFE’S GOOD Scholarship Program 2024
ಹೆಚ್ಚಿನ ಮಾಹಿತಿಗಾಗಿ:
Telegram & Whatsapp Group ಗೆ ಸೇರಿ, ದೈನಂದಿನ ಪ್ರಚಲಿತ ವಿದ್ಯಮಾನಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿ ಪಡೆಯಿರಿ.