ಇಂದಿನ ಯುಗದಲ್ಲಿ ವಿಮಾ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ, ಮತ್ತು EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಿಗೆ ಒಂದು ವಿಶೇಷ ಲಾಭವಿದೆ. EPFO ಸದಸ್ಯರು “ಉದ್ಯೋಗಿಯ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) 1976” ಅಡಿಯಲ್ಲಿ 7 ಲಕ್ಷ ರೂ.ವರೆಗೆ ಉಚಿತ ವಿಮಾ ಕವರೇಜ್ ಪಡೆಯುತ್ತಾರೆ. ಈ ವಿಮೆಯು ಕಾರ್ಮಿಕನ ಅನಾರೋಗ್ಯ, ಅಪಘಾತ, ಅಥವಾ ಸ್ವಾಭಾವಿಕ ಮರಣದ ಸಂದರ್ಭದಲ್ಲಿಒದಗಿಸಲಾಗುತ್ತದೆ.

ವಿಮೆ ಪಡೆಯುವುದು ಹೇಗೆ?
EPFO ಸದಸ್ಯರಾಗಿದ್ದರೆ, ನಿಮ್ಮ ಸಂಬಳದಿಂದ ಭವಿಷ್ಯ ನಿಧಿ (ಪಿಎಫ್) ಕಡಿತಗೊಳ್ಳುತ್ತದೆ. ಈ ಪಿಎಫ್ ಕಡಿತಗೊಳ್ಳುವುದರಿಂದ, ನೀವು 7 ಲಕ್ಷ ರೂ.ವರೆಗೆ ವಿಮಾ ರಕ್ಷಣೆಯನ್ನು ಪಡೆಯುವರು. ಅದಕ್ಕಾಗಿ ನೀವು ಯಾವುದೇ ಪ್ರೀಮಿಯಂ ಪಾವತಿಸಲು ಅಗತ್ಯವಿಲ್ಲ. ಈ ವಿಮೆಯನ್ನು EPFO ನ “EDLI” ಯೋಜನೆಯಡಿ ನೀಡಲಾಗುತ್ತದೆ.
ವಿಮಾ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ವಿಮಾ ಮೊತ್ತವು ನಿಮ್ಮ ಕಳೆದ 12 ತಿಂಗಳ ಸಂಬಳದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ, ವಿಮಾ ಕ್ಲೈಮ್ ಮೊತ್ತವು ನಿಮ್ಮ ವೇತನ ಮತ್ತು ಡಿಎಗಿಂತ 35 ಪಟ್ಟು ಇರುತ್ತದೆ, ಜೊತೆಗೆ 1,75,000 ರೂ.ವರೆಗಿನ ಬೋನಸ್ ಕೂಡ ಲಭ್ಯವಿರುತ್ತದೆ. ಉದಾಹರಣೆಗೆ, ನೀವು 15,000 ರೂ. ವೇತನ ಪಡೆಯುತ್ತಿದ್ದರೆ, ವಿಮಾ ಮೊತ್ತವು 5,25,000 ರೂ. ಇರುತ್ತದೆ, ಜೊತೆಗೆ ಬೋನಸ್ ಸೇರಿ ಒಟ್ಟು 7 ಲಕ್ಷ ರೂ.ವರೆಗೆ ಕ್ಲೈಮ್ ಮಾಡಬಹುದು.
ಕ್ಲೈಮ್ ಲಭ್ಯತೆ
ಈ ಯೋಜನೆಯಡಿಯಲ್ಲಿ, ಕನಿಷ್ಠ 2.5 ಲಕ್ಷ ರೂ. ಮತ್ತು ಗರಿಷ್ಠ 7 ಲಕ್ಷ ರೂ.ಗಳ ವಿಮಾ ಕ್ಲೈಮ್ ಲಭ್ಯವಿದೆ. ಆದಾಗ್ಯೂ, ನೀವು ಕನಿಷ್ಠ 12 ತಿಂಗಳು ನಿರಂತರವಾಗಿ ಕೆಲಸ ಮಾಡಿರಬೇಕು. ಇದು ಕೆಲಸ ಬಿಟ್ಟವರಿಗೆ ಲಭ್ಯವಿರುವುದಿಲ್ಲ.
ಅಪ್ಲೈ ಮಾಡಲು ಬೇಕಾಗುವ ದಾಖಲೆಗಳು
ವಿಮಾ ಕ್ಲೈಮ್ ಮಾಡುವಾಗ, ನೀವು ಉದ್ಯೋಗಿಯ ಮರಣ ಪ್ರಮಾಣಪತ್ರ, ಉತ್ತರಾಧಿಕಾರ ಪ್ರಮಾಣಪತ್ರ, ಮತ್ತು ಇತರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.
EPFO ಸದಸ್ಯರಿಗೆ ಈ ಉಚಿತ ವಿಮೆ ಯೋಜನೆ ಸರಕಾರದ ಮಹತ್ವದ ಪ್ರಯತ್ನವಾಗಿದೆ, ಇದು ಉದ್ಯೋಗಿಯ ಕುಟುಂಬದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ
- ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್: ಕರ್ನಾಟಕದಲ್ಲಿ ಸೇವೆ ನಿಷೇಧ, ಚಾಲಕರ ಆಕ್ರೋಶ - June 17, 2025
- ಮಲೆನಾಡಿನಲ್ಲಿ ಭಾರಿ ಮಳೆಯ ಆರ್ಭಟ: ಶಾಲೆ-ಕಾಲೇಜುಗಳಿಗೆ ರಜೆ, ರಸ್ತೆ ಬಂದ್, ಜನರ ಆತಂಕ - June 17, 2025
- ಗ್ರಾಹಕರಿಗೆ ಸಿಹಿ ಸುದ್ದಿ: RBI ನಿಂದ ಚಿನ್ನದ ಸಾಲದ ಹೊಸ ನಿಯಮ ಜಾರಿ! - June 16, 2025
Please accepect my name to insurence