liquor prices: ಕರ್ನಾಟಕದ ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಬಂದಿದೆ. ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಬೇರೆ ರಾಜ್ಯಗಳಿಗಿಂತ ಹೆಚ್ಚಿನದಾಗಿರುವುದರಿಂದ, ಇದೀಗ ಕರ್ನಾಟಕದಲ್ಲಿ ಮದ್ಯದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಮೂಲಕ ಹೊರರಾಜ್ಯಗಳಿಂದ ಮದ್ಯ ಖರೀದಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ, ಜೊತೆಗೆ ಕಡಿಮೆ ಮೊತ್ತಕ್ಕೆ ಉತ್ತಮ ಗುಣಮಟ್ಟದ ಮದ್ಯ ಪೂರೈಕೆ ಮಾಡಬಹುದು ಎಂಬುದು ಅಬಕಾರಿ ಇಲಾಖೆಯ ಉದ್ದೇಶವಾಗಿದೆ.

ಮದ್ಯದ ದರದಲ್ಲಿ ಶೇಕಡಾ 15 ರಿಂದ 25 ರಷ್ಟು ಇಳಿಕೆ
ಅಲ್ಲದೆ, ಕರ್ನಾಟಕದಾದ್ಯಂತ ಬ್ರಾಂಡೆಡ್ ಮದ್ಯದ ಬೆಲೆ ಶೇಕಡಾ 15 ರಿಂದ 25 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಜೂನ್‌ನಲ್ಲಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2024 ನೋಟಿಪೈ ಮಾಡಿದ ನಂತರ, ಈ ಬೆಲೆಗಳ ಇಳಿಕೆ ಜಾರಿಗೆ ಬರುವ ನಿರೀಕ್ಷೆ ಇದೆ.
ಅಂತಿಮ ಅಧಿಸೂಚನೆ ಬಾಕಿ
ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಅಂತಿಮ ಅಧಿಸೂಚನೆಯು ರಾಜ್ಯದ ನೆರೆರಾಜ್ಯಗಳಲ್ಲಿನ ಮದ್ಯದ ದರಗಳಿಗೆ ಹೊಂದಾಣಿಕೆ ಆಗುವಂತೆ ಭಾರತೀಯ ಮದ್ಯ (ಐಎಂಎಲ್) ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸುವ ಸಾಧ್ಯತೆ ಇದೆ. ಈ ನಿಯಮಗಳು ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದರೂ, ರಾಜಕೀಯ ಕಾರಣಗಳಿಂದ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಚಿಲ್ಲರೆ ಮಳಿಗೆಗಳಲ್ಲಿ ದರ ವ್ಯತ್ಯಾಸಕ್ಕೆ ಇನ್ನೂ ಕಾಲಾವಕಾಶ
ಚಿಲ್ಲರೆ ಮದ್ಯ ಮಳಿಗೆಗಳಲ್ಲಿ ದರ ವ್ಯತ್ಯಾಸ ಕಂಡುಬರುವುದಕ್ಕೆ ಕನಿಷ್ಠ ಒಂದರಿಂದ ಎರಡು ತಿಂಗಳು ಬೇಕು ಎಂದು ಚಿಲ್ಲರೆ ಮದ್ಯ ವ್ಯಾಪಾರದ ಮೂಲಗಳು ತಿಳಿಸಿದ್ದಾರೆ. ಆದರೆ, ಈ ಬದಲಾವಣೆಯಿಂದಾಗಿ ಅಬಕಾರಿ ಇಲಾಖೆಯ ಆದಾಯವೂ ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರತಿಸ್ಪರ್ಧಿ ರಾಜ್ಯಗಳಲ್ಲಿ ಮದ್ಯ ದರಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಲಭ್ಯವಾಗುವುದರಿಂದ, ಮದ್ಯಪ್ರಿಯರು ಮತ್ತು ವ್ಯಾಪಾರಸ್ಥರು ಈ ಬೆಳವಣಿಗೆಗೆ ಆದರಿಸುತ್ತಾರೆ.
- Gold Price: ಚಿನ್ನದ ಬೆಲೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಮಹಿಳೆಯರು, ಆಭರಣ ಪ್ರಿಯರಿಗೆ ಶಾಕ್! - July 3, 2025
- Adike Bele Vime 2025: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ! - July 3, 2025
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025
This post really resonated with me. Keep up the good work.