ಮಿತ್ರರೇ, ಸರ್ಕಾರವು ಡ್ರೈವಿಂಗ್ ಲೈಸೆನ್ಸ್ (Driving Licence) ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ದೊಡ್ಡ ಹೆಜ್ಜೆ ಹಾಕಿದೆ. ಈಗ, ನೀವು RTO ಕಚೇರಿಗೆ ಹೋಗದೇ, ನಿಮ್ಮ ಮನೆಗೆಲೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಇದು ಡ್ರೈವಿಂಗ್ ಲೈಸೆನ್ಸ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೆರವಾಗಲಿದೆ.

ಲರ್ನರ್ ಲೈಸೆನ್ಸ್ ಪಡೆಯುವುದು ಮತ್ತಷ್ಟು ಸರಳ
Learner Driving Licence ಪಡೆಯುವವರು ಯಾವುದೇ ನಗರದಲ್ಲಿ ಇದ್ದರೂ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆಯಬಹುದು. ಚಾಲನಾ ಪರೀಕ್ಷೆಯನ್ನು ಕೂಡ ಆನ್ಲೈನ್ ಮೂಲಕವೇ ಬರೆಯಬಹುದು, RTO ಕಚೇರಿಗೆ ಹೋಗುವ ಅವಶ್ಯಕತೆಯೇ ಇಲ್ಲ.
ಶಾಶ್ವತ ಡ್ರೈವಿಂಗ್ ಲೈಸೆನ್ಸ್ ಆನ್ಲೈನ್ ಮೂಲಕ
ಈ ಹೊಸ ಬದಲಾವಣೆಯೊಂದಿಗೆ, ನೀವು ತಾತ್ಕಾಲಿಕ ವಿಳಾಸದಲ್ಲಿ ಇದ್ದರೂ ಶಾಶ್ವತ ಡ್ರೈವಿಂಗ್ ಲೈಸೆನ್ಸ್ (Permanent Driving Licence) ಪಡೆಯುವ ಅನುಕೂಲವು ಲಭ್ಯವಾಗಲಿದೆ. ಒಂದು ವೇಳೆ ಮೈಸೂರಿನಲ್ಲಿ ನೆಲೆಸಿದ್ದರೂ, ಬೆಂಗಳೂರು ಅಥವಾ ಬೇರೆ ಪಟ್ಟಣದಿಂದಲೂ ಡಿಎಲ್ ಪಡೆಯಲು ಅರ್ಜಿ ಹಾಕಬಹುದು. ಅರ್ಜಿಯ ನಂತರ, ಲೈಸೆನ್ಸ್ ನಿಮ್ಮ ವಿಳಾಸಕ್ಕೆ ನೇರವಾಗಿ ಪೋಸ್ಟ್ ಮೂಲಕ ಬರಲಿದೆ.
ಹೊಸ ನಿಯಮಗಳು ಜನರಿಗೆ ಅನುಕೂಲ
ಈ ಹೊಸ ವ್ಯವಸ್ಥೆ ಜನರಿಗೆ, ವಿಶೇಷವಾಗಿ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಹಳ ಉಪಯುಕ್ತವಾಗಲಿದೆ. ಡ್ರೈವಿಂಗ್ ಲೈಸೆನ್ಸ್ ನೀಡುವ ಪ್ರಕ್ರಿಯೆ ಸರಳವಾಗುತ್ತಿದ್ದರಿಂದ, ಶಾಶ್ವತ ಡಿಎಲ್ ಪಡೆಯಲು ಅನಾವಶ್ಯಕವಾಗಿ RTO ಕಚೇರಿಗೆ ಹೋಗಿ ಸಮಯ ವ್ಯಯ ಮಾಡುವ ಅವಶ್ಯಕತೆ ಇಲ್ಲ.