ಕರ್ನಾಟಕದಲ್ಲಿ ಬಿಯರ್ ಪ್ರಿಯರು ಮತ್ತೆ ಬೆಲೆ ಏರಿಕೆಯ ಶಾಕ್ ಎದುರಿಸಬೇಕಾಗಿದೆ. ರಾಜ್ಯ ಸರ್ಕಾರ ಬಿಯರ್ ಬೆಲೆಯನ್ನು ಪ್ರತಿ ಬಾಟಲ್‌ಗೆ 10 ರಿಂದ 30 ರೂ.ವರೆಗೆ ಹೆಚ್ಚಿಸಲು ಮುಂದಾಗಿದೆ. ಮತ್ತೊಂದೆಡೆ, ಪ್ರೀಮಿಯಂ ಮದ್ಯ ಸೇವಕರಿಗೆ ಸುಸ್ತು ಕಡಿಮೆ ಮಾಡುವುದಾಗಿ, ಪ್ರೀಮಿಯಂ ಮದ್ಯದ ದರ ಶೇಕಡಾ 20ರಷ್ಟು ಇಳಿಕೆ ಮಾಡುವುದಾಗಿ ಸರ್ಕಾರ ತೀರ್ಮಾನಿಸಿದೆ.

ಬಿಯರ್ ಬೆಲೆ ಏರಿಕೆ:
ಬಿಯರ್ ಬೆಲೆ ಏರಿಕೆಯ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ, ಆದರೆ ನಿಖರ ದರ ಏರಿಕೆ ಬೆಲೆ, ಬಿಯರ್ ಬ್ರಾಂಡ್ ಮತ್ತು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಈ ಕ್ರಮದ ಮೂಲಕ ಸರ್ಕಾರ, ಬಿಯರ್ ಮಾರಾಟದ ಮೂಲಕ ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ ಬೆಲೆ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಪರಿಷ್ಕೃತ ಬೆಲೆ ಸಂಪೂರ್ಣವಾಗಿ ಜಾರಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ.
ಪ್ರೀಮಿಯಂ ಮದ್ಯದ ಬೆಲೆಯಲ್ಲಿ ಇಳಿಕೆ:
ಇನ್ನು ಸರ್ಕಾರ ಭಾರತೀಯ ನಿರ್ಮಿತ ಪ್ರೀಮಿಯಂ ಮದ್ಯದ (ಐಎಂಎಲ್) ಮಾರಾಟವನ್ನು ಉತ್ತೇಜಿಸಲು ದರಗಳನ್ನು ಶೇಕಡಾ 20 ರಷ್ಟು ಕಡಿಮೆ ಮಾಡುವ ಯೋಜನೆಯನ್ನು ಕೈಗೊಂಡಿದೆ. ಈ ದರ ಇಳಿಕೆಯಿಂದಾಗಿ, ಮದ್ಯ ಪ್ರಿಯರು ಹೆಚ್ಚು ಖುಷಿಯಾಗಬಹುದು, ಮತ್ತು ಮದ್ಯದ ಮಾರಾಟಗಾರರ ದೀರ್ಘಕಾಲದ ಬೇಡಿಕೆಗೂ ಇದು ಉತ್ತೇಜನ ನೀಡಲಿದೆ.
ಬಿಯರ್ ಮಾರಾಟದಲ್ಲಿ ಏರಿಕೆ:
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿ ಬದಲಾವಣೆ, ಬೇಸಿಗೆಯ ತಾಪಮಾನದಲ್ಲಿ ಏರಿಕೆ, ಬಿಯರ್ ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಎಲ್ಲಾ ರೀತಿಯ ಬಿಯರ್‌ಗಳಿಗೆ ಏಕರೂಪದ ದರವನ್ನು ಅನ್ವಯಿಸಲಾಗಿದೆ. ಆದರೆ, ಬಿಯರ್‌ನಲ್ಲಿ ಆಲ್ಕೋಹಾಲ್ ಅಂಶವನ್ನು ಆಧರಿಸಿ, ಮೂರು ವಿಭಿನ್ನ ಬೆಲೆ ಸ್ಲ್ಯಾಬ್‌ಗಳನ್ನು ಪರಿಚಯಿಸಲು ಅಬಕಾರಿ ಇಲಾಖೆ ಮುಂದಾಗಿದೆ. ದರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ, ಇದು ಜಾರಿಗೆ ಬರಲಿದೆ.
ಕರ್ನಾಟಕ ಸರ್ಕಾರದ ಈ ನಿರ್ಧಾರವು, ಬಿಯರ್ ಪ್ರಿಯರನ್ನು ನೊಂದು ಮಾಡುತ್ತಿದ್ದರೆ, ಪ್ರೀಮಿಯಂ ಮದ್ಯ ಪ್ರಿಯರಿಗೆ ಹೊಸ ವರ್ಷಾಚರಣೆ ಮಾಡಲು ಖುಷಿ ನೀಡಿದೆ.
- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 2000 ಹಣ ಈ ದಿನ ಬಿಡುಗಡೆ, ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ - June 25, 2025
- ಇ-ಹಾಜರಾತಿ ಕಡ್ಡಾಯ: ಶಾಲಾ ಮಕ್ಕಳಿಗೆ ನವೀನ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ! - June 25, 2025
- SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ..!! ಅರ್ಜಿ ಹೇಗೆ ಹಾಕಬೇಕು ಗೊತ್ತಾ? - June 25, 2025
Leave a Reply