ಬಿಗ್ ಬಾಸ್ ಶೋಗೆ ವಿದಾಯ ಘೋಷಿಸಿದ ಕಿಚ್ಚ ಸುದೀಪ್: 11 ವರ್ಷಗಳ ಪ್ರಯಾಣ ಅಂತ್ಯ

ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್, ಬಿಗ್ ಬಾಸ್ ಕನ್ನಡ ಶೋಗೆ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀಪ್ ಈ ಸುದ್ದಿ ಹಂಚಿಕೊಂಡಿದ್ದು, 11ನೇ ಸೀಸನ್ ಈ ಶೋನಲ್ಲಿ ಅವರ ಕೊನೆಯ ನಿರೂಪಣೆ ಎಂದು ತಿಳಿಸಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಹಾಗೂ ಕನ್ನಡ ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಿದೆ.

Kiccha Sudeep said goodbye to Bigg Boss
Kiccha Sudeep said goodbye to Bigg Boss

11 ಸೀಸನ್ ಗಳ ಯಶಸ್ಸಿನ ನಂತರ ವಿದಾಯ ಬಿಗ್ ಬಾಸ್ ಕನ್ನಡ ಶೋನಲ್ಲಿ ಸುದೀಪ್ ನಿರೂಪಣೆಯ ಕೌಶಲ್ಯ ಮತ್ತು ಪ್ರಭಾವದಿಂದ ಈ ಶೋ ಅಪಾರ ಜನಪ್ರಿಯತೆ ಗಳಿಸಿತ್ತು. 11 ವರ್ಷಗಳ ಕಾಲ ಅವರು ಈ ಶೋವನ್ನು ಯಶಸ್ವಿಯಾಗಿ ಮುನ್ನಡೆಸಿದ್ರು. ಆದರೆ, ಈಗ “ಇದು ನನ್ನ ಕೊನೆಯ ಬಿಗ್ ಬಾಸ್” ಎಂದು ಘೋಷಿಸಿದ್ದು, ಅಭಿಮಾನಿಗಳಿಗೆ ನಿರಾಶೆ ತಂದಿದೆ.

ಬಿಗ್ ಬಾಸ್ ಶೋನಿಂದ ದೂರ ಸರಿಯಲು ಕಾರಣವೇನು? ಸುದೀಪ್ ಅವರು ಈ ನಿರ್ಧಾರಕ್ಕೆ ಆಧಿಕೃತ ಕಾರಣಗಳನ್ನು ಬಹಿರಂಗಪಡಿಸದಿದ್ದರೂ, ಕೆಲವು ಮೂಲಗಳ ಪ್ರಕಾರ ಚಲನಚಿತ್ರಗಳಿಗೆ ಹೆಚ್ಚು ಸಮಯ ಮೀಸಲಿಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಚಿತ್ರರಂಗದಲ್ಲಿ ಹೆಚ್ಚಿನ ಚಿತ್ರಗಳನ್ನು ಮಾಡುವುದು ಮತ್ತು ಹೊಸ ಪ್ರಯತ್ನಗಳಿಗೆ ಅವಕಾಶ ನೀಡುವುದು ಅವರು ಬಿಗ್ ಬಾಸ್ ಗೆ ವಿದಾಯ ನೀಡಲು ಕಾರಣವಾಗಿರಬಹುದು.

ಬಿಗ್ ಬಾಸ್ ನಲ್ಲಿ ಸುದೀಪ್ ಸಂಭಾವನೆ ಎಷ್ಟು? ಸುದೀಪ್ ಬಿಗ್ ಬಾಸ್ ಶೋನ ಪ್ರತಿ ಎಪಿಸೋಡ್ ಗೆ 12 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಒಟ್ಟಿನಲ್ಲಿ ಒಂದು ಸೀಸನ್ ಗೆ ಅವರು 10-12 ಕೋಟಿ ರೂ. ಗಳಿಸುತ್ತಿದ್ದರು ಎಂದು ಮಾಧ್ಯಮಗಳ ವರದಿ ಹೇಳುತ್ತದೆ.

ಅಭಿಮಾನಿಗಳಿಗೆ ಕೊನೆ ಸಲಹೆ ಸುದೀಪ್ ಅವರ ಅಭಿಮಾನಿಗಳು ಈ ನಿರ್ಧಾರಕ್ಕೆ ತೀರ ಬೇಸರಗೊಂಡಿದ್ದಾರೆ, ಆದರೆ ಸುದೀಪ್ ತಮ್ಮ ಅಭಿಮಾನಿಗಳಿಗೆ ನಿರಂತರ ಬೆಂಬಲಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. “ನನ್ನ ಮುಂದಿನ ಪ್ರಯಾಣಕ್ಕೆ ನಿಮ್ಮ ಹಾರೈಕೆ ಅಗತ್ಯವಿದೆ,” ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಶೋ ನಂತರದ ಸುದೀಪ್ ಯೋಜನೆಗಳು ಬಿಗ್ ಬಾಸ್ ಗೆ ವಿದಾಯ ಹೇಳಿದ ನಂತರ, ಸುದೀಪ್ ಅವರು ಅವರ ಚಿತ್ರರಂಗದ ಕರಿಯರ್ ಗೆ ಹೆಚ್ಚಿನ ಒತ್ತು ಕೊಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಅವರ ಹೊಸ ಸಿನಿಮಾಗಳು, ನೂತನ ಯೋಜನೆಗಳು ಮತ್ತು ಅಭಿಮಾನಿಗಳಿಗೆ ಹೊಸ ಕಿಕ್ ನೀಡುವ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.

Leave a Reply

Your email address will not be published. Required fields are marked *