ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಹಾಕಲು ಇನ್ನು ಮೂರೇ ದಿನ ಬಾಕಿ.

Government Advocate: ಸರ್ಕಾರಿ ವಕೀಲರ ಹುದ್ದೆಗೆ ಸರ್ಕಾರವು ತೆರೆಯುವಿಕೆಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಸ್ಥಾನವು ಅರ್ಹ ಮತ್ತು ಅನುಭವಿ ವಕೀಲರಿಗೆ ಕಾನೂನು ವಿಷಯಗಳಲ್ಲಿ ಸರ್ಕಾರದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.

Application Invitation for the post of Government Advocate
Application Invitation for the post of Government Advocate

ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಾವಣಗೆರೆ, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ. ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು

ದಾವಣಗೆರೆ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಲು ಕಾನೂನು ಪದವಿ ಪಡೆದ 10 ವರ್ಷಗಳ ಕಾಲ ವಕೀಲ ವೃತ್ತಿ ಸೇವಾನುಭವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ತಾತ್ಕಾಲಿಕ ಹುದ್ದೆಯಾಗಿರುತ್ತದೆ.

ನೇಮಕಾತಿಯ ಪ್ರಮುಖ ವಿವರಗಳು

ಹುದ್ದೆ: ಸರ್ಕಾರಿ ವಕೀಲ
ಅರ್ಹತೆ: ಸಂಬಂಧಿತ ಅನುಭವದೊಂದಿಗೆ ಅರ್ಹ ಕಾನೂನು ವೃತ್ತಿಪರರು
ಅಪ್ಲಿಕೇಶನ್ ಗಡುವು: 23/07/2024ರ ಸಂಜೆ 5 ಗಂಟೆಯೊಳಗಾಗಿ
ಸಂಬಳ: ಸ್ಪರ್ಧಾತ್ಮಕ ಮತ್ತು ಅನುಭವಕ್ಕೆ ಅನುಗುಣವಾಗಿ

ಬೇಕಾಗುವಂತಹ ದಾಖಲೆಗಳು

ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ 5ರಲ್ಲಿ ಜೆ. ಹೆಚ್. ಎಂ. ಶಿರಸ್ತೇದಾರರಿಂದ ಅರ್ಜಿ ಪಡೆದು ಇತ್ತೀಚಿನ ಮೂರು ಭಾವಚಿತ್ರ, ಸೇವಾನುಭವ ದೃಢೀಕರಣ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ, ಪೊಲೀಸ್ ಅಧೀಕ್ಷಕರಿಂದ ಪಡೆದ ಗುಣ, ನಡತೆ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಅರ್ಹತೆ ದಾಖಲೆಗಳೊಂದಿಗೆ ಜುಲೈ 23 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಹರಿಹರ ಅಪರ ಸರ್ಕಾರಿ ವಕೀಲರ ಹುದ್ದೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ತಾತ್ಕಾಲಿಕ ಹುದ್ದೆಯಾಗಿದ್ದು, ಅರ್ಹ ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿ ಕೊಠಡಿ ಸಂಖ್ಯೆ 5ರಲ್ಲಿ ಜೆ. ಹೆಚ್. ಎಂ. ಶಿರಸ್ತೇದಾರ್ ಇವರಿಂದ ಪಡೆಯಬಹುದು.

ಬೇಕಾಗುವಂತಹ ಅರ್ಹತೆಗಳು

ಅರ್ಜಿ ಸಲ್ಲಿಕೆ ಮಾಡುವವರು 7 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಸೇವಾನುಭವ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ ದಾಖಲೆಗಳು, ಗುಣ ನಡತೆ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜುಲೈ 25ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ:

ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲು ಅರ್ಹ ನ್ಯಾಯವಾದಿಗಳಿಂದ ಶಿವಮೊಗ್ಗದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5 ಮತ್ತು 26(2) ಹಾಗೂ 12(ಎ) (ಬಿ) ಮತ್ತು (ಸಿ) ರನ್ವಯ ಅರ್ಜಿ ಕರೆಯಲಾಗಿದೆ.

ಬೇಕಾಗುವಂತಹ ಅರ್ಹತೆಗಳು

ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಆಯ್ಕೆ ಬಯಸುವವರು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರಬೇಕು. ಆಯ್ಕೆ ಬಯಸುವ ಅರ್ಹ ನ್ಯಾಯವಾದಿಗಳು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿಯನ್ನು ದಿನಾಂಕ 23/07/2024ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-221100, 08182-221010, 9110642146 ಅನ್ನು ಸಂಪರ್ಕಿಸಬಹುದು.

ಸರ್ಕಾರಿ ವಕೀಲರ ಹುದ್ದೆಯ ಪ್ರಾರಂಭವು ಅನುಭವಿ ಕಾನೂನು ವೃತ್ತಿಪರರಿಗೆ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಒಂದು ವಿಶಿಷ್ಟ ಅವಕಾಶವಾಗಿದೆ. ಅರ್ಹತೆಗಳನ್ನು ಪೂರೈಸುವವರಿಗೆ ಅರ್ಜಿ ಸಲ್ಲಿಸಲು ಮತ್ತು ಕಾನೂನು ವ್ಯವಸ್ಥೆಯಲ್ಲಿ ಅರ್ಥಪೂರ್ಣ ಪ್ರಭಾವ ಬೀರಲು ಈ ಅವಕಾಶದ ಲಾಭವನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ. ನ್ಯಾಯದ ಆಡಳಿತಕ್ಕೆ ಕೊಡುಗೆ ನೀಡಲು ಮತ್ತು ನಿಮ್ಮ ವೃತ್ತಿಪರ ಸ್ಥಿತಿಯನ್ನು ಹೆಚ್ಚಿಸಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

Leave a Reply

Your email address will not be published. Required fields are marked *