ಬೆಂಗಳೂರು: ಕೃಷಿ ಇಲಾಖೆ 2024-25ರ ಆರ್ಥಿಕ ವರ್ಷದ ಅನುದಾನ ಯೋಜನೆಯಡಿಯಲ್ಲಿ, ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕಳೆ ಕೊಚ್ಚುವ ಯಂತ್ರ, ಪವರ್ ವೀಡರ್, ರೋಟೋವೇಟರ್, ಡೀಸೆಲ್ ಪಂಪ್ ಸೆಟ್ ಸೇರಿದಂತೆ ಹಲವಾರು ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಸಹಾಯಧನ (ಸಬ್ಸಿಡಿ) ನೀಡಲಾಗುತ್ತಿದೆ. ಈ ಸೌಲಭ್ಯಕ್ಕಾಗಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಹಾಯಧನದ ವಿವರಗಳು:
- ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರ ತನಕ ಸಹಾಯಧನವನ್ನು ಒದಗಿಸಲಾಗುತ್ತದೆ.
- ಸೂಕ್ಷ್ಮ ನೀರಾವರಿ ಯೋಜನೆಯಡಿ – ಎಲ್ಲಾ ರೈತರಿಗೆ ಶೇ.90ರ ಸಹಾಯಧನದಡಿ ತುಂತುರು ನೀರಾವರಿ ವ್ಯವಸ್ಥೆಯನ್ನೂ ಸಹ ಲಭ್ಯವಿದೆ.
ಅರ್ಜಿಯ ಪ್ರಕ್ರಿಯೆ:
ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆದ ರೈತರು, ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಪಡೆದು, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಸಬ್ಸಿಡಿ ಲಭ್ಯವಿರುವ ಯಂತ್ರೋಪಕರಣಗಳು:
- ಮಿನಿ ಟ್ರ್ಯಾಕ್ಟರ್
- ಪವರ್ ಟಿಲ್ಲರ್
- ಪವರ್ ವೀಡರ್
- ರೋಟೋವೇಟರ್
- ಪವರ್ ಸ್ಟ್ರೇಯರ್
- ಡೀಸೆಲ್ ಪಂಪ್ ಸೆಟ್
- ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣದ ಯಂತ್ರ
- ಪ್ಲೋರ್ ಮಿಲ್, ಮಿನಿ ರೈಸ್ ಮಿಲ್, ರಾಗಿ ಕ್ಲೀನಿಂಗ್ ಯಂತ್ರ
- ಚಿಲ್ಲಿ ಪೌಡರಿಂಗ್ ಯಂತ್ರ ಮುಂತಾದವು.
ಅರ್ಜಿಗಾಗಿ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಜಮೀನಿನ ಪಹಣಿ
- 100 ರೂಪಾಯಿ ಬಾಂಡ್ ಪೇಪರ್
- ಮೊಬೈಲ್ ಸಂಖ್ಯೆ
ಈ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತ ರೈತರು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವಂತೆ ಕೃಷಿ ಇಲಾಖೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು.
ಈ ಯೋಜನೆ, ರೈತರು ತಮ್ಮ ಕೃಷಿ ಕಾರ್ಯಗಳಿಗೆ ತಂತ್ರಜ್ಞಾನವನ್ನು ತಂದುಕೊಳ್ಳಲು ಉತ್ತೇಜನ ನೀಡುವ ಜೊತೆಗೆ, ಬೆಳೆ ಬೆಳೆಸುವ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.
Satyappa basappa Hiroji
Santhosh naik M E s/o Eshwar naik Kommanal (p)Nyamathi (T)Davanagere (D)mussenal (V)
Santhosh naik M E s/o Eshwar naik Kommanal (p)Nyamathi (T)Davanagere (D)mussenal (V)577001
Sultanapur
Taq rayibag
Dik belagavi