ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಗೆ ಆರ್ಥಿಕ ನೆರವು ನೀಡಲು 2015ರಲ್ಲಿ “ಸುಕನ್ಯಾ ಸಮೃದ್ಧಿ ಯೋಜನೆ”ಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ದೇಶಾದ್ಯಾಂತ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಈ ಯೋಜನೆ ಅಡಿಯಲ್ಲಿ ಠೇವಣಿ ಮಾಡುತ್ತಿದ್ದಾರೆ.

ದಿನಕ್ಕೆ ರೂ. 35 ಠೇವಣಿ: 21 ವರ್ಷದ ಬಳಿಕ ರೂ. 5 ಲಕ್ಷ!
ಈ ಯೋಜನೆಯ ಅಡಿಯಲ್ಲಿ, ನೀವು ಪ್ರತಿ ತಿಂಗಳು ರೂ. 1000 ಠೇವಣಿ ಮಾಡಿದರೆ, 15 ವರ್ಷಗಳಲ್ಲಿ ₹1,80,000 ಠೇವಣಿ ಮಾಡಿ, ನಿಮ್ಮ ಮಗಳು 21 ವರ್ಷ ತುಂಬುವ ಹೊತ್ತಿಗೆ ಒಟ್ಟು ₹5,09,000 ಗಳಿಸಬಹುದು. ಇದು ಪ್ರತಿ ದಿನಕ್ಕೆ ಕೇವಲ ₹35 ಠೇವಣಿ ಮಾಡೋದಕ್ಕಿಂತ ಹೆಚ್ಚೇನಲ್ಲ, ಆದರೆ ಇದರಿಂದ ನಿಮ್ಮ ಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಆರ್ಥಿಕ ಭದ್ರತೆ ಸಿಗಲಿದೆ.
ಸುಕನ್ಯಾ ಸಮೃದ್ಧಿ ಯೋಜನೆ: ನೋಂದಣಿ ಪ್ರಕ್ರಿಯೆ
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಲು, ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಹೋಗಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಬಹುದು. ಇದು ಪ್ರಕ್ರಿಯೆ ಸರಳವಾಗಿದೆ:
- ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಲು ಕನಿಷ್ಠ ಠೇವಣಿ ಮೊತ್ತ ₹250 ಆಗಿದ್ದು, ಗರಿಷ್ಠ ₹1.50 ಲಕ್ಷ ವರ್ಷಕ್ಕೆ ಠೇವಣಿ ಮಾಡಬಹುದು.
- ಖಾತೆ ತೆರೆಯುವ ವೇಳೆಗೆ, ನಿಮಗೆ ಮಗುವಿನ ಜನನ ಪ್ರಮಾಣಪತ್ರ, ಪೋಷಕರ ಐಡಿ, ಮತ್ತು ವಿಳಾಸದ ದಾಖಲೆಗಳ ಅಗತ್ಯವಿರುತ್ತದೆ.
ಹಣ ಠೇವಣಿ ಮತ್ತು ಹಿಂಪಡೆಸಲು ಸಮಯ
ಖಾತೆ ತೆರೆದ ನಂತರ, 18 ವರ್ಷಗಳು ತುಂಬಿದಾಗ, ಮಗಳ ವಿದ್ಯಾಭ್ಯಾಸಕ್ಕಾಗಿ ಠೇವಣಿ ಮೊತ್ತದ 50% ಹಿಂಪಡೆಸಲು ಅವಕಾಶವಿದೆ. 21 ವರ್ಷ ಮುಗಿದ ನಂತರ, ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.
ಲಾಭಗಳು
ಈ ಯೋಜನೆ ಅಡಿಯಲ್ಲಿ ಠೇವಣಿ ಮಾಡಲಾಗುವ ಮೊತ್ತದ ಮೇಲೆ ಲಾಭದಾಯಕ ಬಡ್ಡಿಯನ್ನು ಸರ್ಕಾರ ಒದಗಿಸುತ್ತಿದ್ದು, ಈ ಹಣವು ಮಗಳ ಭವಿಷ್ಯಕ್ಕೆ ದೊಡ್ಡ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ.