ರಾಜ್ಯದಲ್ಲಿ ಅತಿವೃಷ್ಟಿ ಪರಿಹಾರ: ₹297 ಕೋಟಿ DBT ಮೂಲಕ ಪಾವತಿಸಿದ ಕಂದಾಯ ಇಲಾಖೆ
ರಾಜ್ಯದಲ್ಲಿ ಈ ವರ್ಷದ ಅತಿವೃಷ್ಟಿಯಿಂದ ಉಂಟಾದ ಬೆಳೆ ಮತ್ತು ಆಸ್ತಿ ಹಾನಿಗೆ ₹297 ಕೋಟಿ ಪರಿಹಾರವನ್ನು ನೇರ ನಗದು ವರ್ಗಾವಣೆಯ (DBT) ಮೂಲಕ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು ಈ ವಿವರವನ್ನು ಹಂಚಿಕೊಂಡಿದ್ದಾರೆ.

ಬೆಳೆ, ಮನೆ, ಮತ್ತು ಆಸ್ತಿ ಹಾನಿಗೆ ಪರಿಹಾರ ವಿವರಗಳು:
ಕೇಂದ್ರ SDRF ಮಾರ್ಗಸೂಚಿಯ ಪ್ರಕಾರ, ಜಂಟಿ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಜಮಾ ಮಾಡಲಾಗಿದೆ. ಹಿಂಗಾರು ಮಳೆಯ ಹಾನಿಗೂ ಪರಿಹಾರ ಪಾವತಿ ಪ್ರಗತಿಯಲ್ಲಿದೆ.
ಮನೆ ಹಾನಿ ಪರಿಹಾರದ ಪಾವತಿಸಬೇಕಾದ ಮೊತ್ತ:
ಹಾನಿ ಪ್ರಮಾಣ | ಪಾವತಿಸಬೇಕಾದ ಮೊತ್ತ (₹) |
---|---|
ಅತೀ ಸಣ್ಣ ಪ್ರಮಾಣದ ಹಾನಿ (15-20%) | ₹6,500 |
ಮದ್ಯಮ ಪ್ರಮಾಣದ ಹಾನಿ (20-50%) | ₹30,000 |
ಹೆಚ್ಚು ಪ್ರಮಾಣದ ಹಾನಿ (50-75%) | ₹50,000 |
ಸಂಪೂರ್ಣ ಹಾನಿ – ಅಧಿಕೃತ ಮನೆ | ₹1,20,000 |
ಸಂಪೂರ್ಣ ಹಾನಿ – ಅನಧಿಕೃತ ಮನೆ | ₹1,00,000 |
ಸಂಪೂರ್ಣ ಹಾನಿಗೊಳಗಾದ ಅಧಿಕೃತ ಮನೆಗಳಿಗೆ ವಸತಿ ಯೋಜನೆಯಡಿ ಹೊಸ ಮನೆಗಳ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ.
ಇನ್ನು ಓದಿ: ನೀರಿನ ಕೊರತೆಯಿಂದ ಬಳಲುತ್ತಿರುವ ರೈತರಿಗೆ ಕರ್ನಾಟಕ ಸರ್ಕಾರದಿಂದ ಸಹಾಯ.! ಇಷ್ಟು ದಾಖಲೆ ಇದ್ರೆ ಮಾತ್ರ
2024ನೇ ಸಾಲಿನ ಅತಿವೃಷ್ಟಿ ಪರಿಹಾರದ ವಿವರ:
ಮುಂಗಾರು ಹಂಗಾಮು:
ಹಾನಿಯ ವಿವರ | ಒಟ್ಟು ಹಾನಿ | ಪಾವತಿಸಿದ ಮೊತ್ತ (₹ ಲಕ್ಷ) |
---|---|---|
ಮಾನವ ಹಾನಿ | 100 | ₹285.00 |
ಜಾನುವಾರು ಹಾನಿ | 522 | ₹87.75 |
ಮನೆ ಹಾನಿ | 15,851 | ₹6217.88 |
ಬೆಳೆ ಹಾನಿ | 77,339 | ₹9493.57 |
ಹಿಂಗಾರು ಹಂಗಾಮು:
ಹಾನಿಯ ವಿವರ | ಒಟ್ಟು ಹಾನಿ | ಪಾವತಿಸಿದ ಮೊತ್ತ (₹ ಲಕ್ಷ) |
---|---|---|
ಮಾನವ ಹಾನಿ | 33 | ₹165.00 |
ಜಾನುವಾರು ಹಾನಿ | 192 | ₹32.69 |
ಮನೆ ಹಾನಿ | 4,964 | ₹1916.61 |
ಬೆಳೆ ಹಾನಿ | 82,449 | ₹9145.94 |
ಬೆಳೆ ಪರಿಹಾರದ ಮಾಹಿತಿ ಚೆಕ್ ಮಾಡುವ ವಿಧಾನ:
- ಪರಿ ಹರಾ ತಂತ್ರಾಂಶಕ್ಕೆ ಭೇಟಿ ನೀಡಿ:
➤ ಅಧಿಕೃತ Parihara Payment Portal. - ವರ್ಷ ಆಯ್ಕೆ ಮಾಡಿ, ನಂತರ ಹಾನಿಯ ಪ್ರಕಾರ, ಜಿಲ್ಲೆ, ಹೋಬಳಿ, ಗ್ರಾಮ ಆಯ್ಕೆ ಮಾಡಿ.
- ವರದಿ ಪಡೆಯಲು “ಸರ್ಚ್” ಕ್ಲಿಕ್ ಮಾಡಿ.
ರೈತರಿಗೆ ಪರಿಹಾರ ನೆರವು:
ಈ ಪರಿಹಾರ ಪ್ರಕ್ರಿಯೆಯಿಂದ ರಾಜ್ಯದ ರೈತರಿಗೆ ಮಳೆ ಮತ್ತು ಪ್ರವಾಹದಿಂದ ಉಂಟಾದ ನಷ್ಟದಿಂದ ಚೇತರಿಸಿಕೊಳ್ಳಲು ಸರ್ಕಾರ ನೆರವು ಒದಗಿಸಿದೆ. ನೇರ ಹಣ ವರ್ಗಾವಣೆಯ ಮೂಲಕ ತಕ್ಷಣ ಪರಿಹಾರ ಪಾವತಿಸಲಾಗಿದ್ದು, ಇದು ರೈತರಿಗೆ ಅತೀ ಅವಶ್ಯಕ ಸಹಾಯವಾಗಿದೆ.