ನಮಸ್ಕಾರ ಸ್ನೇಹಿತರೇ!
Krishi Bhagya Yojana: 2024-25ನೇ ಸಾಲಿನಲ್ಲಿ, ಕೃಷಿ ಭಾಗ್ಯ ಯೋಜನೆ ರೈತರಿಗೆ ಬೆಳೆ ರಕ್ಷಣೆ ಮತ್ತು ನೀರಾವರಿ ವ್ಯವಸ್ಥೆಯಲ್ಲಿ ಸಹಾಯ ಮಾಡುವಂತೆ ಸರ್ಕಾರವು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ, ಬೆಳೆಗಳು ಒಣಗುವ ಸಂದರ್ಭದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸಲು ನೆರವಾಗುವುದು. ಇದು ರೈತರ ಉಳಿತಾಯ ಹೆಚ್ಚಿಸಲು ಮತ್ತು ಬೆಳೆಗಳ ಉತ್ಪಾದಕತೆ ವೃದ್ಧಿಸಲು ಮಹತ್ವದ ಯೋಜನೆಯಾಗಿದೆ.

ಅರ್ಜಿಯನ್ನು ಹೇಗೆ ಸಲ್ಲಿಸಬಹುದು?
- ರೈತರು ತಮ್ಮ ಅರ್ಜಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬಹುದು.
- ಮೊದಲ ಅರ್ಜಿ ಸಲ್ಲಿಸಿದವರಿಗೆ ಮುಂಬರುವ ಸಾಲಿನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
- ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿವೆ.
- ಅರ್ಜಿಯನ್ನು ಸಲ್ಲಿಸಲು ಅರ್ಹತೆ: ಕನಿಷ್ಠ 1 ಎಕರೆ ಜಮೀನನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.
ಯೋಜನೆಯ ಪ್ರಮುಖ ಸೌಲಭ್ಯಗಳು:
- ಕ್ಷೇತ್ರ ಬದು ನಿರ್ಮಾಣ:
- ಸಾಮಾನ್ಯ ವರ್ಗ: 80% ಸಹಾಯಧನ
- ಪರಿಶಿಷ್ಟ ಜಾತಿ/ಪಂಗಡ: 90% ಸಹಾಯಧನ
- ಕೃಷಿ ಹೊಂಡ ನಿರ್ಮಾಣ:
- ಸಾಮಾನ್ಯ ವರ್ಗ: 80% ಸಹಾಯಧನ
- ಪರಿಶಿಷ್ಟ ಜಾತಿ/ಪಂಗಡ: 90% ಸಹಾಯಧನ
- ಪಾಲಿಥೀನ್ ಹೊದಿಕೆ (ನೀರನ್ನು ಇಂಗದಂತೆ ತಡೆಯಲು):
- ಸಾಮಾನ್ಯ ವರ್ಗ: 80% ಸಹಾಯಧನ
- ಪರಿಶಿಷ್ಟ ಜಾತಿ/ಪಂಗಡ: 90% ಸಹಾಯಧನ
- ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ:
- ಸಾಮಾನ್ಯ ವರ್ಗ: 40% ಸಹಾಯಧನ
- ಪರಿಶಿಷ್ಟ ಜಾತಿ/ಪಂಗಡ: 50% ಸಹಾಯಧನ
- ನೀರು ಎತ್ತಲು ಡಿಸೇಲ್/ಪೇಟ್ರೋಲ್ ಪಂಪ್‍ಸೆಟ್:
- ಸಾಮಾನ್ಯ ವರ್ಗ: 80% ಸಹಾಯಧನ
- ಪರಿಶಿಷ್ಟ ಜಾತಿ/ಪಂಗಡ: 90% ಸಹಾಯಧನ
- ಸುಕ್ಷ್ಮ ನೀರಾವರಿ (ತುಂತುರು/ಹನಿ):
- ಎಲ್ಲಾ ವರ್ಗದ ರೈತರಿಗೆ 90% ಸಹಾಯಧನ ಇರುತ್ತದೆ.
ಯೋಜನೆಯ ಪ್ರಯೋಜನಗಳು:
- ರೈತರು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳಿಗೆ ಕಷ್ಟದ ಸಂದರ್ಭದಲ್ಲಿ ನೀರಾವರಿ ವ್ಯವಸ್ಥೆ ಮಾಡಬಹುದು.
- ಕೃಷಿ ಹೊಂಡ, ತಂತಿ ಬೇಲಿ, ಪಂಪ್‍ಸೆಟ್, ಮತ್ತು ಪಾಲಿಥೀನ್ ಹೊದಿಕೆ ಗಳನ್ನು ಸರ್ಕಾರದಿಂದ ಸಹಾಯಧನದ ಮೂಲಕ ನೀಡಲಾಗುತ್ತದೆ.
- ಈ ಯೋಜನೆಯು ಬೆಳೆಗಳನ್ನು ಒಣಗುವ ದಶೆಗೆಯಿಂದ ರಕ್ಷಿಸಿ, ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ರೈತರು ಹನಿ/ತುಂತುರು ನೀರಾವರಿ ಅಳವಡಿಸಿಕೊಳ್ಳುವುದರಿಂದ ನೀರು, ಸಮಯ ಮತ್ತು ದುಡಿಮೆ ಉಳಿಯುತ್ತದೆ.
ಹೆಚ್ಚಿನ ಮಾಹಿತಿಗಾಗಿ: ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಯೋಜನೆಯ ಸಂಪೂರ್ಣ ಮಾಹಿತಿ ಪಡೆದು, ಅರ್ಜಿಯನ್ನು ತಕ್ಷಣವೇ ಸಲ್ಲಿಸಬಹುದು.
ಕೃಷಿ ಭಾಗ್ಯ ಯೋಜನೆ 2024-25 ರೈತರಿಗೆ ದೀರ್ಘಕಾಲಿಕ ಬೆಳೆ ರಕ್ಷಣೆಗೆ ಮತ್ತು ನೀರಾವರಿ ಅನುಕೂಲಗಳನ್ನು ಒದಗಿಸುವ ಅತ್ಯುತ್ತಮ ಯೋಜನೆ. ಈ ಯೋಜನೆಯು ನೀರಿನ ಅಭಾವವನ್ನು ಕಡಿಮೆ ಮಾಡಿ, ಬೆಳೆಗಳ ಉತ್ಪಾದಕತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.
- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 2000 ಹಣ ಈ ದಿನ ಬಿಡುಗಡೆ, ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ - June 25, 2025
- ಇ-ಹಾಜರಾತಿ ಕಡ್ಡಾಯ: ಶಾಲಾ ಮಕ್ಕಳಿಗೆ ನವೀನ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ! - June 25, 2025
- SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ..!! ಅರ್ಜಿ ಹೇಗೆ ಹಾಕಬೇಕು ಗೊತ್ತಾ? - June 25, 2025
ಸದಾಶಿವ್ ಬಸಪ್ಪ ಕಚ್ಚು
ಸದಾಶಿವ್ ಬಸಪ್ಪ ಕಚ್ಚು ಸಾಕಿನ್ ಜಗದಾಳ