KSRTC 13,000 ಚಾಲಕ ಹುದ್ದೆಗಳ ನೇಮಕಾತಿ.! 7ನೇ ತರಗತಿ ಪಾಸಾಗಿದ್ದರೆ ಸಾಕು.

KSRTC Recruitment: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 13,000 ಚಾಲಕ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಭಿಯಾನವನ್ನು ಪ್ರಕಟಿಸಿದ್ದು, ರಾಜ್ಯಾದ್ಯಂತ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಅವಕಾಶವನ್ನು ಸೃಷ್ಟಿಸಿದೆ. KSRTC ತನ್ನ ಫ್ಲೀಟ್ ಅನ್ನು ವಿಸ್ತರಿಸಲು ಮತ್ತು ಸಾರಿಗೆ ಸೇವೆಗಳನ್ನು ಸುಧಾರಿಸಲು, ಸಾವಿರಾರು ವ್ಯಕ್ತಿಗಳಿಗೆ ಸ್ಥಿರ ಉದ್ಯೋಗವನ್ನು ಒದಗಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮವು ಬಂದಿದೆ.

KSRTC Recruitment 2024, 13,000 Driver Posts
KSRTC Recruitment 2024, 13,000 Driver Posts

KSRTCಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿಯಲ್ಲಿ ಬರೋಬ್ಬರಿ 13,000 ಚಾಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ಚಾಮರಾಜನಗರ ಜಿಲ್ಲೆ KSRTC ಡಿಪೋ, ರಾಮನಗರ & ಆನೇಕಲ್ ತಾಲೂಕು KSRTC ಡಿಪೋದಲ್ಲಿ ಈ ಹುದ್ದೆಗಳು ಖಾಲಿ ಇದೆ. ಆಯಾ ಬಸ್‌ ಡಿಪೋಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.   

ವಿದ್ಯಾರ್ಹತೆ:

 7ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಹೆವಿ ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಅನುಭವ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್‌ ಹೊಂದಿಲೇಬೇಕು.

ವೇತನ: 

ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹23,000. ವೇತನ ನೀಡಲಾಗುವುದು. ಇದರ ಜೊತೆಗೆ ESI & EPF ಸೌಲಭ್ಯಗಳು ಸಹ ದೊರೆಯುತ್ತದೆ.

ಆಯ್ಕೆ ವಿಧಾನ: 

ಅಭ್ಯರ್ಥಿಗಳಿಗೆ ಚಾಲನೆ ತರಬೇತಿ ನೀಡಿ ಪರೀಕ್ಷೆಯನ್ನು ನಡೆಸಿ ಸಂದರ್ಶನ & ದಾಖಲೆಗಳ ಪರಿಶೀಲನೆಯ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು KSRTCಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೂರವಾಣಿ ಸಂಖ್ಯೆ

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲೆ KSRTC ಡಿಪೋದ ದೂರವಾಣಿ ಸಂಖ್ಯೆ 8050980889, 8618876846, ರಾಮನಗರ & ಆನೇಕಲ್ ತಾಲೂಕು KSRTC ಬಸ್‌ ಡಿಪೋದ ದೂರವಾಣಿ ಸಂಖ್ಯೆ 8050980889, 8618876846ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು. 

13,000 ಚಾಲಕ ಹುದ್ದೆಗಳಿಗೆ KSRTC ಯ ನೇಮಕಾತಿ ಅಭಿಯಾನವು ಕರ್ನಾಟಕದಾದ್ಯಂತ ಉದ್ಯೋಗಾಕಾಂಕ್ಷಿಗಳಿಗೆ ಗಣನೀಯ ಅವಕಾಶವಾಗಿದೆ. ಇದು ರಾಜ್ಯದ ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸಲು ಮಾತ್ರವಲ್ಲದೆ ಸಾವಿರಾರು ಜನರಿಗೆ ಸ್ಥಿರ ಮತ್ತು ಲಾಭದಾಯಕ ಉದ್ಯೋಗವನ್ನು ಒದಗಿಸಲು ಭರವಸೆ ನೀಡುತ್ತದೆ. ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮತ್ತು KSRTC ಯೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರೆ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಸಂಪೂರ್ಣವಾಗಿ ತಯಾರು ಮಾಡಿ, ತ್ವರಿತವಾಗಿ ಅರ್ಜಿ ಸಲ್ಲಿಸಿ ಮತ್ತು KSRTC ಯಲ್ಲಿ ಸ್ಥಿರ ಮತ್ತು ಭರವಸೆಯ ಕೆಲಸವನ್ನು ಭದ್ರಪಡಿಸುವತ್ತ ಮೊದಲ ಹೆಜ್ಜೆ ಇರಿಸಿ.

6 thoughts on “KSRTC 13,000 ಚಾಲಕ ಹುದ್ದೆಗಳ ನೇಮಕಾತಿ.! 7ನೇ ತರಗತಿ ಪಾಸಾಗಿದ್ದರೆ ಸಾಕು.

Leave a Reply

Your email address will not be published. Required fields are marked *