ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ವಿವಿಧ ಇತರೆ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಟ್ಟು 2,679 ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ಗಮನಿಸಬೇಕು.

ಹುದ್ದೆಗಳ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ಬ್ಯಾಕ್ಲಾಗ್ ಹುದ್ದೆಗಳು | ಒಟ್ಟು ಹುದ್ದೆಗಳು |
---|---|---|---|
ಕಿರಿಯ ಸ್ಟೇಷನ್ ಪರಿಚಾರಕ | 380 | 31 | 411 |
ಕಿರಿಯ ಪವರ್ ಮ್ಯಾನ್ (KPTCL) | 1,818 | 450 | 2,268 |
ಒಟ್ಟು | 2,198 | 481 | 2,679 |
ವೇತನದ ವಿವರ:
ವರ್ಷ | ತಿಂಗಳ ವೇತನ |
---|---|
1ನೇ ವರ್ಷ | ₹17,000 |
2ನೇ ವರ್ಷ | ₹19,000 |
3ನೇ ವರ್ಷ | ₹21,000 |
ಮೂರು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ವೇತನ ಶ್ರೇಣಿ ₹28,550 – ₹63,000 ಶ್ರೇಣಿಯಲ್ಲಿರುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆ:
- ಶೈಕ್ಷಣಿಕ ಅರ್ಹತೆ: ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.
- ಕನ್ನಡ ಬಲ್ಲಿಕೆ: ಕನ್ನಡದಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ.
- ದೈಹಿಕ ಸಾಮರ್ಥ್ಯ: ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರಬೇಕು.
ಸಹನ ಶಕ್ತಿ ಪರೀಕ್ಷೆ:
ಪರೀಕ್ಷೆಯ ಹೆಸರು | ವಿವರಗಳು |
---|---|
ವಿದ್ಯುತ್ ಕಂಬ ಹತ್ತುವುದು | 8 ಮೀಟರ್ ಎತ್ತರ (ಕಡ್ಡಾಯ) |
100 ಮೀಟರ್ ಓಟ | 14 ಸೆಕೆಂಡ್ |
ಸ್ಕಿಪ್ಪಿಂಗ್ | 50 ಬಾರಿ ಒಂದು ನಿಮಿಷಕ್ಕೆ |
ಶಾಟ್‌ಫುಟ್ (12 ಪೌಂಡ್‌ಗಳು) | 8 ಮೀಟರ್ (3 ಅವಕಾಶ) |
800 ಮೀಟರ್ ಓಟ | 3 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು |
ಅರ್ಜಿಯನ್ನು ಸಲ್ಲಿಸಲು ಮುಖ್ಯ ದಿನಾಂಕಗಳು:
ಘಟನೆ | ದಿನಾಂಕ |
---|---|
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 21-10-2024 |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 20-11-2024 |
ಶುಲ್ಕ ಪಾವತಿಸಲು ಕೊನೆಯ ದಿನಾಂಕ | 25-11-2024 |
ವಯೋಮಿತಿ:
ವರ್ಗ | ಕನಿಷ್ಠ ವಯೋಮಿತಿ | ಗರಿಷ್ಠ ವಯೋಮಿತಿ |
---|---|---|
ಸಾಮಾನ್ಯ ವರ್ಗ | 18 ವರ್ಷ | 35 ವರ್ಷ |
ಪ್ರವರ್ಗ 2A, 2B, 3A, 3B | 18 ವರ್ಷ | 38 ವರ್ಷ |
ಪರಿಶಿಷ್ಟ ಜಾತಿ/ವರ್ಗ, ಪ್ರವರ್ಗ-1 | 18 ವರ್ಷ | 40 ವರ್ಷ |
ಅರ್ಜಿಯನ್ನು ಸಲ್ಲಿಸಲು ವಿಧಾನ:
ಅಭ್ಯರ್ಥಿಗಳು ಕವಿಪ್ರನಿನಿ ಅಥವಾ ಇತರೆ ಕಂಪನಿಗಳ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು, ಅಧಿಕೃತ ಡೌನ್ಲೋಡ್ ಲಿಂಕ್.
- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 2000 ಹಣ ಈ ದಿನ ಬಿಡುಗಡೆ, ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ - June 25, 2025
- ಇ-ಹಾಜರಾತಿ ಕಡ್ಡಾಯ: ಶಾಲಾ ಮಕ್ಕಳಿಗೆ ನವೀನ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ! - June 25, 2025
- SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ..!! ಅರ್ಜಿ ಹೇಗೆ ಹಾಕಬೇಕು ಗೊತ್ತಾ? - June 25, 2025
Leave a Reply