ಕರ್ನಾಟಕ ಲೋಕಸೇವಾ ಆಯೋಗ (KPSC) 2024 ನೇ ಸಾಲಿನ ಭೂಮಾಪಕರ ನೇಮಕಾತಿ ಅಧಿಸೂಚನೆಗೆ ಪರಿಷ್ಕೃತ ರೂಪ ನೀಡಿದ್ದು, ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ ಒಟ್ಟು 750 ಹುದ್ದೆಗಳು (190 ಹೈದ್ರಾಬಾದ್ ಕರ್ನಾಟಕ ವೃಂದ + 560 ಉಳಿಕೆ ಮೂಲ ವೃಂದ) ಭರ್ತಿಗಾಗಿ ಅವಕಾಶ ಕಲ್ಪಿಸಲಾಗಿದೆ.
Karnataka Public Service Commission Recruitment for Surveyor Posts 2024
ನೇಮಕಾತಿಯ ಮುಖ್ಯಾಂಶಗಳು
ವಿವರಗಳು
ಮಾಹಿತಿ
ನೇಮಕಾತಿ ಪ್ರಾಧಿಕಾರ
ಕರ್ನಾಟಕ ಲೋಕಸೇವಾ ಆಯೋಗ (KPSC)
ಉದ್ಯೋಗ ಇಲಾಖೆ
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಹುದ್ದೆಗಳ ಹೆಸರು
ಭೂಮಾಪಕರು
ಒಟ್ಟು ಹುದ್ದೆಗಳ ಸಂಖ್ಯೆ
750 (HK: 190, RPC: 560)
ವೇತನ ಶ್ರೇಣಿ
₹23,500 – ₹47,650
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ
ಹುದ್ದೆಗೆ ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ:
ಬಿಇ/ಬಿ.ಟೆಕ್ (ಸಿವಿಲ್) ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಪಾಸ್.
ಪಿಯುಸಿ (ವಿಜ್ಞಾನ ವಿಭಾಗ) ಅಥವಾ 12ನೇ ತರಗತಿಯಲ್ಲಿ ಗಣಿತದಲ್ಲಿ ಕನಿಷ್ಠ 60% ಅಂಕಗಳು.
ಕರ್ನಾಟಕ ವೃತ್ತಿ ಶಿಕ್ಷಣ ಇಲಾಖೆಯ ‘ಲ್ಯಾಂಡ್ ಅಂಡ್ ಸಿಟಿ ಸರ್ವೆ’ ಪದವಿ ಪೂರ್ವ ಡಿಪ್ಲೊಮಾ.
ಈ ಹಿಂದಿನ ಭೂಮಾಪಕರ ನೇಮಕಾತಿ ಅಧಿಸೂಚನೆಗೆ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲಾಗದ ಅಭ್ಯರ್ಥಿಗಳು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕಗಳು ನಂತರದಲ್ಲಿ ಪ್ರಕಟಿಸಲಾಗುವುದು.