ಕರ್ನಾಟಕ ಲೋಕಸೇವಾ ಆಯೋಗವು (KPSC) ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ಅರ್ಹ ವ್ಯಕ್ತಿಗಳಿಗೆ ಉತ್ತೇಜಕ ಅವಕಾಶವನ್ನು ಪ್ರಕಟಿಸಿದೆ. ಈ ನೇಮಕಾತಿ ಅಭಿಯಾನವು ರಾಜ್ಯದ ಕೈಗಾರಿಕೆಗಳಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ನುರಿತ ವೃತ್ತಿಪರರನ್ನು ಕರೆತರುವ ಮೂಲಕ ಕರ್ನಾಟಕದ ಕೈಗಾರಿಕಾ ವಲಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
Table of Contents
ದಿನಾಂಕ 15-03-2024 ರಂದು ಪದವಿ ಮಟ್ಟದ ವಿದ್ಯಾರ್ಹತೆಯನ್ನು ಹೊಂದಿರುವ ವಿವಿಧ ಇಲಾಖೆಗಳಲ್ಲಿನ ವಿವಿಧ ಗ್ರೂಪ್ ಸಿ 60+16 (HK) ಹುದ್ದೆಗಳನ್ನು ವೃಂದವಾರು ಪ್ರತ್ಯೇಕವಾಗಿ ಅಧಿಸೂಚಿಸಿ, ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಅಧಿಸೂಚನೆಗಳಲ್ಲಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ 50+13(HK) ಹುದ್ದೆಗಳಿಗೆ ಇದೀಗ ಇಲಾಖೆಯ ಪ್ರಸ್ತಾವನೆಯಂತೆ ವಿದ್ಯಾರ್ಹತೆಗಳನ್ನು ತಿದ್ದುಪಡಿ ಮಾಡುವುದರೊಂದಿಗೆ ಮತ್ತೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ವಿದ್ಯಾರ್ಹತೆಯ ಕೋರ್ಸ್‌ಗಳಲ್ಲಿ ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಇ ಪದವಿಗಳನ್ನು ಮಾತ್ರ ಪರಿಗಣಿಸಿ, ಅರ್ಜಿ ಸಲ್ಲಿಸಲು ದಿನಾಂಕ 29-04-2024 ರಿಂದ 10-06-2024 ರವರೆಗೆ ಅವಕಾಶ ನೀಡಲಾಗಿತ್ತು. ಪ್ರಸ್ತುತ ಸದರಿ ಹುದ್ದೆಗಳಿಗೆ ಬಿಬಿಎಂ ಮತ್ತು ಬಿ.ಟೆಕ್ ಪದವಿಗಳನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಪತ್ರದಲ್ಲಿ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ 50+13 (HK) ಹುದ್ದೆಗಳಿಗೆ ಬಿಬಿಎಂ ಮತ್ತು ಬಿ.ಟೆಕ್ ಪದವಿಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನು ಈ ಕೆಳಗಿನ ದಿನಾಂಕಗಳಲ್ಲಿ ನೀಡಲಾಗಿದೆ.
ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿ
ನೇಮಕಾತಿ ಪ್ರಾಧಿಕಾರ | ಕರ್ನಾಟಕ ಲೋಕಸೇವಾ ಆಯೋಗ |
ಉದ್ಯೋಗ ಇಲಾಖೆ | ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ |
ಹುದ್ದೆ ಹೆಸರು | ಕೈಗಾರಿಕಾ ವಿಸ್ತರಣಾಧಿಕಾರಿ |
ಹುದ್ದೆಗಳ ಸಂಖ್ಯೆ | 50+13(HK) |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ವಿಸ್ತರಿಸಿದ ಪ್ರಾರಂಭಿಕ ದಿನಾಂಕ | 23-07-2024 |
ಅರ್ಜಿ ಸಲ್ಲಿಸಲು ವಿಸ್ತರಿಸಿದ ಕೊನೆ ದಿನಾಂಕ | 01-08-2024 |
ಶುಲ್ಕ ಪಾವತಿಸಲು ವಿಸ್ತರಿಸಿದ ಕೊನೆ ದಿನಾಂಕ | 01-08-2024 |
ಈ ಹುದ್ದೆಗಳಿಗೆ ಬಿಬಿಎಂ ಮತ್ತು ಬಿ.ಟೆಕ್ ಪಾಸಾಗಿರುವವರು ಇನ್ನು ಅರ್ಜಿ ಸಲ್ಲಿಸದಿದ್ದಲ್ಲಿ ಈಗ ಮೇಲಿನ ನಿಗದಿತ ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ
ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಇ, ಬಿಬಿಎಂ ಮತ್ತು ಬಿ.ಟೆಕ್ ಪಾಸ್.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೈಗಾರಿಕಾ ವಿಸ್ತಾರಣಾಧಿಕಾರಿ ವೇತನ ಶ್ರೇಣಿ Rs.33,450 – 62,600.
ವಯಸ್ಸಿನ ಅರ್ಹತೆ
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಉದ್ಯೋಗ ವಿವರ
ಹುದ್ದೆಯ ಹೆಸರು | ಕೈಗಾರಿಕಾ ವಿಸ್ತಾರಣಾಧಿಕಾರಿ |
ವಿವರ | ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ |
ಪ್ರಕಟಣೆ ದಿನಾಂಕ | 2024-07-23 |
ಕೊನೆ ದಿನಾಂಕ | 2024-08-01 |
ಉದ್ಯೋಗ ವಿಧ | ಪೂರ್ಣಾವಧಿ |
ಉದ್ಯೋಗ ಕ್ಷೇತ್ರ | ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ |
ವೇತನ ವಿವರ | INR 33450 to 62600 /Month |
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು | ಕರ್ನಾಟಕ ಲೋಕಸೇವಾ ಆಯೋಗ |
ವೆಬ್‌ಸೈಟ್ ವಿಳಾಸ | https://www.kpsc.kar.nic.in/ |
ಕರ್ನಾಟಕ ಲೋಕಸೇವಾ ಆಯೋಗದಿಂದ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಕೊಡುಗೆ ನೀಡಲು ಅರ್ಹ ವೃತ್ತಿಪರರಿಗೆ ಸುವರ್ಣಾವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಲು ಮತ್ತು ಕರ್ನಾಟಕದ ಕೈಗಾರಿಕೆಗಳನ್ನು ಸಮೃದ್ಧ ಭವಿಷ್ಯದತ್ತ ಮುನ್ನಡೆಸಲು ಈ ಮಹತ್ವದ ಉಪಕ್ರಮದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
ಈ ನೇಮಕಾತಿ ಮತ್ತು ಇತರ ಉದ್ಯೋಗಾವಕಾಶಗಳ ಕುರಿತು ಹೆಚ್ಚಿನ ನವೀಕರಣಗಳಿಗಾಗಿ, ನಮ್ಮ ಸುದ್ದಿ ಬ್ಲಾಗ್‌ಗೆ ಟ್ಯೂನ್ ಮಾಡಿ.