Janoushadi Kendragala Sthagita
ಬೆಂಗಳೂರು, ಮೇ 23, 2025:
ರಾಜ್ಯ ಸರ್ಕಾರ ಜನೌಷಧಿ ಯೋಜನೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಕೇವಲ 180 ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ಉಳಿದ 1220 ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

🔹 ಆಸ್ಪತ್ರೆಗಳಲ್ಲಿ ಔಷಧ ಮಾರಾಟದ ಅಗತ್ಯವಿಲ್ಲ:
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಲಭ್ಯವಿರುವುದರಿಂದ, ಅಲ್ಲಿ ಔಷಧ ಮಾರಾಟ ಮಾಡುವ ಮೆಡಿಕಲ್ ಶಾಪ್‌ಗಳ ಅವಶ್ಯಕತೆಯಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಈ ನಿರ್ಧಾರದಿಂದ ಬಡ ರೋಗಿಗಳಿಗೆ ತೊಂದರೆ ಆಗದಂತೆ ಎಲ್ಲಾ ಸೌಲಭ್ಯಗಳನ್ನ ಆಸ್ಪತ್ರೆಗಳಲ್ಲಿ ನೇರವಾಗಿ ನೀಡಲಾಗುವುದು.
🔹 ಬ್ರಾಂಡೆಡ್ ಔಷಧಿಗಳ ಮಾರಾಟದ ಕುರಿತು ತನಿಖೆ:
ಜನೌಷಧಿ ಕೇಂದ್ರಗಳಲ್ಲಿ ಕೇವಲ ಜನರಿಕ್ ಔಷಧಿಗಳನ್ನ ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಆದರೆ ಕೆಲವು ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿಗಳ ಮಾರಾಟದ ಬಗ್ಗೆ ಮಾಹಿತಿ ದೊರೆತಿದ್ದು, ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸುತ್ತಿದೆ.
🔹 ಹೊಸ ಪ್ರಸ್ತಾವನೆಗಳಿಗೆ ತಡೆ:
ಇತ್ತೀಚೆಗೆ ಬಂದ 31 ಹೊಸ ಜನೌಷಧಿ ಕೇಂದ್ರಗಳ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಿರಸ್ಕರಿಸಲಾಗಿದೆ. ಕೇಂದ್ರಗಳನ್ನು ಸ್ಥಗಿತಗೊಳಿಸುವ ಮುನ್ನ ಒಪ್ಪಂದಗಳ ಪರಿಶೀಲನೆ, ಅವಧಿ ಮುಗಿದಿರುವದೆಯೇ ಎಂಬುದರ ಪರಿಶೀಲನೆ ಮುಗಿಸಿ ಕ್ರಮ ಕೈಗೊಳ್ಳಲಾಗುವುದು.
🔹 ರಾಜಕೀಯ ಬೇರೆಸಬಾರದು:
ಜನೌಷಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಾರ್ವಜನಿಕರ ಹಿತಕ್ಕಾಗಿ ಮತ್ತು ಸರ್ಕಾರದ ಉಚಿತ ಔಷಧ ವಿತರಣೆಯ ನಿಷ್ಠೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
🔹 ಔಷಧಿಗಳ ಕೊರತೆ ಇಲ್ಲ:
ಸರ್ಕಾರಿ ಔಷಧಿ ಕೇಂದ್ರಗಳಲ್ಲಿ ಔಷಧಿಗಳ ಕೊರತೆ ಇಲ್ಲ. ಕೆಲವು ಕಡಿಮೆ ಬೇಡಿಕೆಯ ಔಷಧಿಗಳಿಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಖರೀದಿ ಮಾಡಬಹುದಾದ ವ್ಯವಸ್ಥೆ ಮಾಡಲಾಗಿದೆ.
- ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್: ಕರ್ನಾಟಕದಲ್ಲಿ ಸೇವೆ ನಿಷೇಧ, ಚಾಲಕರ ಆಕ್ರೋಶ - June 17, 2025
- ಮಲೆನಾಡಿನಲ್ಲಿ ಭಾರಿ ಮಳೆಯ ಆರ್ಭಟ: ಶಾಲೆ-ಕಾಲೇಜುಗಳಿಗೆ ರಜೆ, ರಸ್ತೆ ಬಂದ್, ಜನರ ಆತಂಕ - June 17, 2025
- ಗ್ರಾಹಕರಿಗೆ ಸಿಹಿ ಸುದ್ದಿ: RBI ನಿಂದ ಚಿನ್ನದ ಸಾಲದ ಹೊಸ ನಿಯಮ ಜಾರಿ! - June 16, 2025