ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್‌ನಲ್ಲಿ 1180 ಹುದ್ದೆಗಳ ನೇಮಕಾತಿ.! ITI, ಡಿಪ್ಲೊಮ, ಮತ್ತು ಪದವಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್ (CCL) ತನ್ನ ಘಟಕಗಳಲ್ಲಿ 1180 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇವು ಟ್ರೇಡ್‌ ಅಪ್ರೆಂಟಿಸ್, ಟೆಕ್ನಿಕಲ್ ಅಪ್ರೆಂಟಿಸ್, ಮತ್ತು ಫ್ರೆಶರ್ ಅಪ್ರೆಂಟಿಸ್ ಹುದ್ದೆಗಳಾಗಿದ್ದು, ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್ 21, 2024.

Central Coalfield Limited Recruitment 2024
Central Coalfield Limited Recruitment 2024

ಹೈಲೈಟ್ಸ್‌:

  • CCL‌ನಿಂದ 1180 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ.
  • ಅರ್ಜಿಯ ಕೊನೆ ದಿನಾಂಕ: ಸೆಪ್ಟೆಂಬರ್ 21, 2024.
  • ವಿದ್ಯಾರ್ಹತೆ: ITI, ಡಿಪ್ಲೊಮ, ಮತ್ತು ಪದವಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಅಪ್ರೆಂಟಿಸ್ ಹುದ್ದೆ ವಿಭಾಗಹುದ್ದೆಗಳ ಸಂಖ್ಯೆ
ಟ್ರೇಡ್‌ ಅಪ್ರೆಂಟಿಸ್484
ಫ್ರೆಶರ್ ಅಪ್ರೆಂಟಿಸ್55
ಟೆಕ್ನಿಕಲ್ / ಗ್ರಾಜುಯೇಟ್‌ ಅಪ್ರೆಂಟಿಸ್637
Central Coalfield Limited Recruitment 2024

ಹುದ್ದೆವಾರು ವಿದ್ಯಾರ್ಹತೆ

ಹುದ್ದೆ ಹೆಸರುವಿದ್ಯಾರ್ಹತೆ
ಟ್ರೇಡ್‌ ಅಪ್ರೆಂಟಿಸ್ಐಟಿಐ ಪಾಸ್‌
ಫ್ರೆಶರ್ ಅಪ್ರೆಂಟಿಸ್ಎಸ್‌ಎಸ್‌ಎಲ್‌ಸಿ ಪಾಸ್
ಟೆಕ್ನಿಕಲ್ / ಗ್ರಾಜುಯೇಟ್‌ ಅಪ್ರೆಂಟಿಸ್ಡಿಪ್ಲೊಮ / ಯಾವುದೇ ಪದವಿ
Central Coalfield Limited Recruitment 2024

ನೋಟ್: ಟ್ರೇಡ್‌ ಅಪ್ರೆಂಟಿಸ್ ಮತ್ತು ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳಲ್ಲಿ ಮೆಕ್ಯಾನಿಕಲ್, ಫಿಟ್ಟರ್, ಟರ್ನರ್, ಇಲೆಕ್ಟ್ರೀಷಿಯನ್, ಇಲೆಕ್ಟ್ರಾನಿಕ್, ಕಂಪ್ಯೂಟರ್, ಇತರೆ ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.

ಆಯ್ಕೆ ವಿಧಾನ

  • ಅರ್ಜಿ ಪ್ರಕ್ರಿಯೆ: ಅರ್ಜಿ ಸಲ್ಲಿಸಿದವರನ್ನು ನಿಗದಿತ ವಿದ್ಯಾರ್ಹತೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ವಯಸ್ಸಿನ ಅರ್ಹತೆ

ಹುದ್ದೆ ಹೆಸರುಕನಿಷ್ಠ ವಯೋಮಿತಿಗರಿಷ್ಠ ವಯೋಮಿತಿ
ಟ್ರೇಡ್‌ ಅಪ್ರೆಂಟಿಸ್18 ವರ್ಷ27 ವರ್ಷ
ಫ್ರೆಶರ್ ಅಪ್ರೆಂಟಿಸ್18 ವರ್ಷ22 ವರ್ಷ
ಟೆಕ್ನಿಕಲ್ / ಗ್ರಾಜುಯೇಟ್‌ ಅಪ್ರೆಂಟಿಸ್18 ವರ್ಷ27 ವರ್ಷ
Central Coalfield Limited Recruitment 2024

ಮಾಸಿಕ ಸ್ಟೈಪಂಡ್‌ ವಿವರ

ಹುದ್ದೆ ಹೆಸರುಮಾಸಿಕ ಸ್ಟೈಪಂಡ್‌
ಟ್ರೇಡ್‌ ಅಪ್ರೆಂಟಿಸ್₹7,000
ಫ್ರೆಶರ್ ಅಪ್ರೆಂಟಿಸ್₹6,000
ಟೆಕ್ನಿಕಲ್ ಅಪ್ರೆಂಟಿಸ್‌₹8,000
ಗ್ರಾಜುಯೇಟ್‌ ಅಪ್ರೆಂಟಿಸ್‌₹9,000
Central Coalfield Limited Recruitment 2024

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಅರ್ಜಿ ಸಲ್ಲಿಸಲು: ಆನ್‌ಲೈನ್ ಮೂಲಕ National Apprenticeship Training Scheme (NATS) ವೆಬ್‌ಸೈಟ್ https://portal.mhrdnats.gov.in ಅಥವಾ NAPS Apprenticeship India ವೆಬ್‌ಸೈಟ್ https://www.apprenticeshipindia.gov.in ಗೆ ಭೇಟಿ ನೀಡಿ.
  • ಅಗತ್ಯ ದಾಖಲೆಗಳು:
    • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
    • ಶೈಕ್ಷಣಿಕ ಅರ್ಹತೆಗಳ ಅಂಕಪಟ್ಟಿ
    • ಆಧಾರ್ ಕಾರ್ಡ್‌
    • ಇಮೇಲ್‌ ವಿಳಾಸ
    • ಮೊಬೈಲ್‌ ಸಂಖ್ಯೆ

ಸೂಚನೆಗಳು:

  • ಅರ್ಜಿ ಸಲ್ಲಿಸಲು ಸ್ಪಷ್ಟವಾಗಿರುವ ಎಲ್ಲಾ ಮಾಹಿತಿಯನ್ನು ನೀಡುವುದು ಕಡ್ಡಾಯ.
  • ಹುದ್ದೆಗೆ ಅರ್ಜಿ ಹಾಕಲು ಅರ್ಹತೆಯ ಎಲ್ಲಾ ಪ್ರಮಾಣ ಪತ್ರಗಳನ್ನು ಸಮರ್ಪಕವಾಗಿ ಸಲ್ಲಿಸಬೇಕು.

Leave a Reply

Your email address will not be published. Required fields are marked *