Bus Pass 2025-26: ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ ಪಾಸ್ ಅರ್ಜಿ ಪ್ರಕ್ರಿಯೆ ಆರಂಭ – ಅರ್ಜಿ ಸಲ್ಲಿಸಲು ಈ ದಾಕಲೆ ಆಗತ್ಯ..!!


✍ ಲೇಖಕರು: ಶರತ್ ಕುಮಾರ್ ಮ್
🗓 ದಿನಾಂಕ: 29 ಮೇ 2025

Bus Pass

ಸಾರಿಗೆ ಸಂಸ್ಥೆ ನಗರದ ಲಕ್ಷಾಂತರ ಜನರಿಗೆ ಪ್ರತಿದಿನವೂ ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿರುವ ಪ್ರಮುಖ ಸಾರ್ವಜನಿಕ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳ ಪ್ರಯಾಣವನ್ನು ಸುಲಭಗೊಳಿಸುವ ದೃಷ್ಟಿಯಿಂದ ಸಂಸ್ಥೆಯು ಪ್ರತಿ ವರ್ಷದಂತೆ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.

bmtc student bus pass 2025-26 application
bmtc student bus pass 2025-26 application

ಈ ಬಸ್ ಪಾಸ್‌ಗಳು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ನಿರಂತರ ಪ್ರಯಾಣ ಮಾಡುವ ಸೌಲಭ್ಯವನ್ನೂ, ಆರ್ಥಿಕ ಸಹಾಯವನ್ನೂ ಒದಗಿಸುತ್ತವೆ. ಶಾಲಾ-ಕಾಲೇಜುಗಳಿಗೆ ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಇದು ಬಹುಮುಖ್ಯ ಸೌಲಭ್ಯವಾಗಿದೆ.


📌 ಬಸ್ ಪಾಸ್‌ನ ಪ್ರಮುಖ ಪ್ರಯೋಜನಗಳು:

  • ಉಚಿತ ಅಥವಾ ರಿಯಾಯಿತಿಯ ದರದಲ್ಲಿ ಪಾಸ್ ಲಭ್ಯ.
  • BMTC/KSRTC ಬಸ್‌ಗಳಲ್ಲಿ ನಿರಂತರ ಪ್ರಯಾಣದ ಅವಕಾಶ.
  • ಪ್ರತಿದಿನ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ.
  • ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.

👨‍🎓 ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಕರ್ನಾಟಕದ ಖಾಯಂ ನಿವಾಸಿ ವಿದ್ಯಾರ್ಥಿಗಳು.
  • ಶಾಲೆ, ಕಾಲೇಜು, ತಾಂತ್ರಿಕ, ವೃತ್ತಿಪರ, ವೈದ್ಯಕೀಯ ಅಥವಾ ಪಿಎಚ್‌ಡಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು.

📋 ಅರ್ಜಿಗೆ ಅಗತ್ಯ ದಾಖಲೆಗಳು:

ದಾಖಲೆಗಳ ಹೆಸರುವಿವರಣೆ
ಆಧಾರ್ ಕಾರ್ಡ್ಒರ್ಜಿನಲ್ ಅಥವಾ ಝೆರಾಕ್ಸ್ ಪ್ರತಿಯನ್ನು ಸಜ್ಜುಮಾಡಿಕೊಳ್ಳಿ
ಶಾಲೆ/ಕಾಲೇಜು ಗುರುತಿನ ಚೀಟಿಮಾನ್ಯ ಶಿಕ್ಷಣ ಸಂಸ್ಥೆಯ ID
ವಿದ್ಯಾರ್ಥಿಯ ಫೋಟೋಪಾಸ್‌ಪೋರ್ಟ್ ಗಾತ್ರದ ಫೋಟೋ
ಜಾತಿ ಪ್ರಮಾಣಪತ್ರ (ಆವಶ್ಯಕವಿದ್ದಲ್ಲಿ)ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ
ಮೊಬೈಲ್ ನಂಬರ್OTP ಹಾಗೂ ಮಾಹಿತಿ ಸಿಗಲು ಉಪಯೋಗವಾಗುತ್ತದೆ

🖥️ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (Seva Sindhu ಮೂಲಕ):

ಹಂತ 1: ಇಲ್ಲಿ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ತೆರೆಯಿರಿ.
ಹಂತ 2: ಲಾಗಿನ್ ವಿಭಾಗದಲ್ಲಿ ಮೊಬೈಲ್ ನಂಬರ್/ಇಮೇಲ್ ದಾಖಲಿಸಿ, OTP ಪಡೆದು ಲಾಗಿನ್ ಆಗಿ.
ಹಂತ 3: “Bus Pass” ಎಂದು ಸರ್ಚ್ ಮಾಡಿ ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ.
ಹಂತ 4: ಅಗತ್ಯ ಮಾಹಿತಿ ಹಾಗೂ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ “Submit” ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.


📍 ವಿಶೇಷ ಸೂಚನೆ:

  • BMTC ಜೊತೆಗೆ KSRTC ಬಸ್ ಪಾಸ್‌ಗೂ ಇದೇ ರೀತಿಯ ಪ್ರಕ್ರಿಯೆ ಅನುಸರಿಸಬಹುದು.
  • ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ವಿದ್ಯಾರ್ಥಿಗಳು ತಮ್ಮ ಕಾಲೇಜು ಅಥವಾ ಬಿಎಂಟಿಸಿ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.

📞 ಹೆಚ್ಚಿನ ಮಾಹಿತಿಗಾಗಿ:

ಸಂಪರ್ಕ ಮಾರ್ಗವಿವರ
ಸಹಾಯವಾಣಿ080–22483777
BMTC ವೆಬ್‌ಸೈಟ್Click Here
ಸೇವಾ ಸಿಂಧು ಪೋರ್ಟಲ್Apply Now

📢 ಮಹತ್ವದ ಸೂಚನೆ: ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮಿಸ್ ಮಾಡಿಕೊಳ್ಳಬೇಡಿ. ಪಾಸ್‌ ಪಡೆಯುವ ಮೂಲಕ ನಿಮ್ಮ ಶಿಕ್ಷಣ ಪ್ರಯಾಣವನ್ನು ಸುಲಭಗೊಳಿಸಿ, ಸುರಕ್ಷಿತಗೊಳಿಸಿ!

Sharath Kumar M

Leave a Reply

Your email address will not be published. Required fields are marked *

rtgh