ನಮಸ್ಕಾರ ಸ್ನೇಹಿತರೇ, 2024-25ನೇ ಸಾಲಿನ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ವಿತರಣಾ ಯೋಜನೆ ದಡಿ, ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಡೆಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮವನ್ನು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದು, ರೈತರು ತಮ್ಮ ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬಹುದು.
ಸಾಲ ಸೌಲಭ್ಯ: ಸೆಪ್ಟೆಂಬರ್ 15 ರಿಂದ ಮಾರ್ಚ್ 31ರೊಳಗೆ
ಈ ಸಾಲ ಸೌಲಭ್ಯವನ್ನು 2024 ಸೆಪ್ಟೆಂಬರ್ 15ರಿಂದ 2025 ಮಾರ್ಚ್ 31ರೊಳಗೆ ಪ್ರಾಪ್ತವಾಗಬಹುದಾಗಿದೆ. ರೈತರು ತಮ್ಮ ಪಶುಪಾಲನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ಪಡೆಯಲು ಈ ಅವಧಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ಹಿತವನ್ನು ನೀಡುವ ಮಹತ್ವದ ಕ್ರಮವಾಗಿದೆ.
ಅರ್ಜಿಯ ಪ್ರಕ್ರಿಯೆ
ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ತೆರಳಿ, ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಈ ಸಾಲ ಸೌಲಭ್ಯವು ಬಡ್ಡಿದರದಲ್ಲಿ ಕಡಿಮೆ ಸಹಾಯಧನ ನೀಡುತ್ತದೆ, ಇದರಿಂದ ರೈತರಿಗೆ ಸಾಕಾಣಿಕೆಯನ್ನು ಸುಲಭವಾಗಿ ನಡೆಸಲು ನೆರವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲೂಕುಗಳ ರೈತರು, ತಮ್ಮ ಸ್ಥಳೀಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
- ಚಿತ್ರದುರ್ಗ: 9482943111
- ಚಳ್ಳಕೆರೆ: 9448816499
- ಹೊಳಲ್ಕೆರೆ: 9972965479
- ಹೊಸದುರ್ಗ: 9945298407
- ಹಿರಿಯೂರು: 9483451044
- ಮೊಳಕಾಲ್ಮೂರು: 9900964820
ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ರೈತರು ತಮ್ಮ ಪಶುಪಾಲನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ಪಡೆಯುವುದು ಸಾಂತವ ನಿರ್ವಹಣೆಗೆ ಸಹಕಾರಿಯಾಗಲಿದೆ.