ಬಹುನಿರೀಕ್ಷಿತ ಅಂಗನವಾಡಿ LKG-UKG ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಮಹತ್ವದ ಬೆಳವಣಿಗೆಯು ಬಾಲ್ಯದ ಶಿಕ್ಷಣವನ್ನು ಹೆಚ್ಚಿಸುವ ಮತ್ತು ಅಂಗನವಾಡಿ ವ್ಯವಸ್ಥೆಯ ಅಡಿಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯನ್ನು ಸೂಚಿಸುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದ ನೇಮಕಾತಿ ಅಭಿಯಾನವು ಅಂಗನವಾಡಿ ಕೇಂದ್ರಗಳಲ್ಲಿನ ಅರ್ಹ ಶಿಕ್ಷಕರ ಕೊರತೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಹಿಂದುಳಿದ ಹಿನ್ನೆಲೆಯ ಮಕ್ಕಳಿಗೆ ಬಾಲ್ಯದ ಶಿಕ್ಷಣ ಮತ್ತು ಆರೈಕೆಯನ್ನು ಒದಗಿಸುವಲ್ಲಿ ಈ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತವೆ. ಸಮರ್ಪಿತ ಮತ್ತು ತರಬೇತಿ ಪಡೆದ LKG-UKG ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಯುವ ಕಲಿಯುವವರಿಗೆ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಉಪಕ್ರಮವು ಪ್ರಯತ್ನಿಸುತ್ತದೆ.
ಅಂಗನವಾಡಿಯಲ್ಲೇ ಸರ್ಕಾರಿ ಮಾಂಟೆಸ್ಸರಿ
ಈ ಮೊದಲು ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ LKG-UKG ತರಗತಿ ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ LKG-UKG ಆರಂಭವಾದರೆ ಅಂಗನವಾಡಿ ಕೇಂದ್ರಗಳು ಖಾಲಿಯಾಗುತ್ತವೆ. ಕಾರ್ಯಕರ್ತೆಯರು, ಸಹಾಯಕಿಯರು, ಅಡುಗೆ ಸಹಾಯಕಿಯರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪ್ರತಿಭಟನೆ ನಡೆಸಿದ್ದರು.
ಒಂದು ವೇಳೆ ಪ್ರಾಥಮಿಕ ಪೂರ್ವ ತರಗತಿ ಪ್ರಾರಂಭಿಸುವುದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬದಲು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲೇ ಅಂಗನವಾಡಿ ಕೇಂದ್ರದಲ್ಲಿ LKG-UKG ಆರಂಭಿಸಬೇಕೆ೦ದು ಒತ್ತಾಯಿಸಿ ಪ್ರತಿಭಟಿಸಲಾಗಿತ್ತು. ಅದರಂತೆ ಸರ್ಕಾರ ಇದೀಗ ಅಂಗನವಾಡಿಯಲ್ಲೇ ಜುಲೈ 22ರಿಂದ LKG-UKG ಆರಂಭಿಸಿದೆ.
ಎಷ್ಟು ಸರ್ಕಾರಿ ಮಾಂಟೆಸ್ಸರಿ ಆರಂಭವಾಗಲಿವೆ?
ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಸರ್ಕಾರಿ ಮಾಂಟೆಸ್ಸರಿ ಆರಂಭವಾಗುವುದಿಲ್ಲ. ಆಯ್ದ 5,000 ಅಂಗನವಾಡಿ ಕೇಂದ್ರಗಳಲ್ಲಿ LKG-UKG ತರಗತಿ ಆರಂಭವಾಗಲಿವೆ. ಅತೀ ಹೆಚ್ಚು ಮಕ್ಕಳಿರುವ ಹಾಗೂ ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಮಾತ್ರ ಉನ್ನತೀಕರಣ ಮಾಡಲಾಗುವುದು.
ಮೊದಲ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರಿ ಮಾಂಟೆಸ್ಸರಿಗೆ ಚಾಲನೆ ನೀಡಿದ್ದು, ಇನ್ಮುಂದೆ ಪುಟಾಣಿಗಳು ಅಂಗನವಾಡಿಯಲ್ಲೇ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಕಲಿಯಲಿದ್ದಾರೆ. ಜುಲೈ 22ರಿಂದ ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 5,000 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಾಂಟೆಸ್ಸರಿ ಟೀಚರ್ ನೇಮಕ ಹೇಗೆ?
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ ಮಾಹಿತಿ ಪ್ರಕಾರ ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಸದ್ಯಕ್ಕೆ PUC, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಅವಕಾಶ ನೀಡಲಾಗುವುದು.
ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ವಿದ್ಯಾರ್ಹತೆ ಕುರಿತು ಸಚಿವರು ನೀಡಿದ ಮಾಹಿತಿ ಈ ಕೆಳಗಿನಂತಿದೆ:
- ಒಟ್ಟು ಅಂಗನವಾಡಿ ಕೇಂದ್ರಗಳು : 61,876
- ಉನ್ನತ ಶಿಕ್ಷಣ ಪಡೆದ ಕಾರ್ಯಕರ್ತೆಯರು : 1,682
- ಪದವಿ ಶಿಕ್ಷಣ ಪಡೆದ ಕಾರ್ಯಕರ್ತೆಯರು : 6,363
- PUC ವಿದ್ಯಾರ್ಹತೆ ಕಾರ್ಯಕರ್ತೆಯರು : 15,217
- SSLC ವಿದ್ಯಾರ್ಹತೆ ಕಾರ್ಯಕರ್ತೆಯರು : 38,614
ಮೇಲ್ಕಾಣಿಸಿದ ಕಾರ್ಯಕರ್ತೆಯರ ಪೈಕಿ PUC, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರನ್ನು ಭೋದನೆಗೆ ನೇಮಕ ಮಾಡಲಾಗುತ್ತದೆ. ಉಳಿದ ಮಾಂಟೆಸ್ಸರಿಗಳಿಗೆ ಹೊಸ ನೇಮಕಾತಿ ಮಾಡಲಾಗುವುದು. ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಕನ್ನಡ, ಇಂಗ್ಲೀಷ್ 2 ಮಾಧ್ಯಮಗಳಲ್ಲೂ ಶಿಕ್ಷಣ ನೀಡಲಾಗುವುದು. ಮಾಂಟೆಸ್ಸರಿ ಟೀಚರ್ ನೇಮಕಾತಿ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಮೈಸೂರು ಜಿಲ್ಲೆಯಲ್ಲಿ ಅಂಗನವಾಡಿ ಎಲ್‌ಕೆಜಿ-ಯುಕೆಜಿ ಶಿಕ್ಷಕರ ನೇಮಕಾತಿಯ ಮೊದಲ ಹಂತದ ಪ್ರಾರಂಭವು ಬಾಲ್ಯದ ಶಿಕ್ಷಣವನ್ನು ಸುಧಾರಿಸುವ ಪಯಣದಲ್ಲಿ ಮಹತ್ವದ ಮೈಲಿಗಲ್ಲು. ಪ್ರಕ್ರಿಯೆಯು ತೆರೆದುಕೊಳ್ಳುತ್ತಿದ್ದಂತೆ, ಇದು ಚಿಕ್ಕ ಮಕ್ಕಳಿಗೆ ಪ್ರಯೋಜನಕಾರಿ ಮತ್ತು ಸಮುದಾಯದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವ ಧನಾತ್ಮಕ ಬದಲಾವಣೆಗಳನ್ನು ತರಲು ನಿರೀಕ್ಷಿಸಲಾಗಿದೆ.
ನೇಮಕಾತಿ ಪ್ರಕ್ರಿಯೆ ಮತ್ತು ಈ ಪ್ರದೇಶದಲ್ಲಿ ಬಾಲ್ಯದ ಶಿಕ್ಷಣದ ಮೇಲೆ ಅದರ ಪ್ರಭಾವದ ಕುರಿತು ಹೆಚ್ಚಿನ ನವೀಕರಣಗಳಿಗಾಗಿ ಟ್ಯೂನ್ ಮಾಡಿ.