ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರು ಅಥವಾ ಹೊಸದಾಗಿ ಹೈನುಗಾರಿಕೆ ಆರಂಭಿಸುವ ರೈತರಿಗೆ ಕೃಷಿ ಇಲಾಖೆ ಆರ್ಥಿಕ ನೆರವು ನೀಡುತ್ತಿದೆ. ಸಮಗ್ರ ಕೃಷಿ ಪದ್ದತಿ ಯೋಜನೆಯಡಿ ರೈತರು 2 ಹಸು/ಎಮ್ಮೆಗಳ ಸಾಕಾಣಿಕೆಗೆ ರೂ. 40,000ವರೆಗೆ ಸಹಾಯಧನ ಪಡೆಯಬಹುದು.
ಈ ಯೋಜನೆಯಡಿ ರೈತರು ಹವಾಮಾನ ವೈಪರಿತ್ಯವನ್ನು ಲಘುವಾಗಿ ಎದುರಿಸಲು ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮತ್ತು ಕುರಿ/ಆಡು ಸಾಕಾಣಿಕೆಯನ್ನು ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ. ರೈತರ ಆದಾಯವನ್ನು ಹೆಚ್ಚಿಸುವ ಹಾಗೂ ಸುಸ್ಥಿರತೆಯನ್ನು ಸಾಧಿಸಲು ಕೃಷಿ ಇಲಾಖೆಯು ಸಮಗ್ರ ಕೃಷಿ ಚಟುವಟಿಕೆಗಳ ಜತೆಪಟ್ಟು ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ.
ಯೋಜನೆಯ ಪ್ರಮುಖ ಅಂಶಗಳು:
- ಹಸು/ಎಮ್ಮೆ ಸಾಕಾಣಿಕೆ: 2 ಹಸು/ಎಮ್ಮೆಗಳಿಗೆ ರೂ. 40,000ವರೆಗೆ ನೆರವು.
- ಹೊಂಡ ನಿರ್ಮಾಣ: ನೀರಾವರಿ ಆಧಾರಿತ ಯೋಜನೆಗೆ ರೂ. 40,041ವರೆಗೆ ಸಬ್ಸಿಡಿ.
- ಮೇವು ಬೆಳೆಗೆ: ಮೇವು ಬೆಳೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಗೆ ರೂ. 10,000 ಸಹಾಯಧನ.
- ಕೋಳಿ ಮತ್ತು ಕುರಿ ಸಾಕಾಣಿಕೆ: ಇತರೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ.
ಯೋಜನೆಯ ಅಡಿಯಲ್ಲಿ ಲಭ್ಯವಿರುವ ನೆರವು:
Dairy farming subsidy-ಘಟಕವಾರು ಅರ್ಥಿಕ ನೆರವಿನ ವಿವರ ಹೀಗಿದೆ:
ಘಟಕ | ಸಹಾಯ ಧನ |
ನೀರು ಸಂರಕ್ಷಣೆ: ವಿವಿಧ ಅಳತೆಗಳ ಚಿಕ್ಕ ಹೊಂಡಗಳು (ಲೈನಿಂಗ್ ಸಹಿತ/ ಲೈನಿಂಗ್ ರಹಿತ) (ರಿಯಾಯಿತಿ ಶೇ. 50 ರಂತೆ) | |
10*10*3 | 13,173/- |
12*12*3 | 16,508/- |
15*15*3 | 22,808/- |
18*18*3 | 30,665/- |
21*21*3 | 40,041/- |
ಲೈನಿಂಗ್ ವೆಚ್ಚ | 25000/- |
ಸಸ್ಯಬೇಲಿ | 2500/- |
ಬದುಗಳು/ಟ್ರೆಂಚ್ ಗಳು | 2000/- |
ಬೆಳೆ ಪದ್ದತಿ ಆಧಾರಿತ ಸಮಗ್ರ ಬೆಳೆ ಪ್ರಾತ್ಯಕ್ಷತೆ-ನೂತನ ತಳಿಗಳೊಂದಿಗೆ | 15000/- |
ಸಣ್ಣ ಪ್ರಮಾಣದ ಕುರಿ/ಮೇಕೆ/ಕೋಳಿ ಹಾಗೂ ಮೇವಿನ ಬೆಳೆಗಳು | 10000/- |
ಎರೆಹುಳು ಗೊಬ್ಬರ | 8500/- |
ಅಜೋಲ್ಲಾ | 1000/- |
ಮರ ಆಧಾರಿತ ಕೃಷಿ | 1000/- |
ಕೈ ತೋಟ | 1000/- |
ಮೀನುಗಾರಿಕೆ | 2500/- |
ಹಸು/ಎಮ್ಮೆ (2 ಸಂಖ್ಯೆ) ಖರೀದಿ, ಹೈಬ್ರಿಡ್ ನೇಪಿಯರ್/ ಗಿನಿ ಹುಲ್ಲು ಹಾಗೂ ಅವಶ್ಯಕವಿರುವ ಪಶು ಆಹಾರ | 40,000/- |
ಹೈನುಗಾರಿಕೆಗೆ ಲೋನ್:
ರೈತರಿಗೆ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಲು 2 ಹಸು/ಎಮ್ಮೆ ಸಾಕಾಣಿಕೆಗೆ 50 ಸಾವಿರದವರೆಗೆ ಲೋನ್ ಸೌಲಭ್ಯ ನೀಡಲಾಗುತ್ತಿದೆ. ನೀರಾವರಿ ಪ್ರದೇಶದಲ್ಲಿರುವ ರೈತರು ಈ ಯೋಜನೆಯಡಿ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಈ ಅರ್ಜಿಯನ್ನು ಸಲ್ಲಿಸಲು ರೈತರು ಮುಂದಾಗಬಹುದು. ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಇತ್ಯಾದಿಗಳನ್ನು ಸಲ್ಲಿಸಬೇಕು.
ಸಮಗ್ರ ಕೃಷಿ ಪದ್ದತಿ ರೈತರಿಗಾಗಿ ಹಲವು ದಾರಿಗಳನ್ನು ತೆರೆಯುತ್ತಿದೆ. ಹೈನುಗಾರಿಕೆಗೆ ನೀಡುವ ಸಬ್ಸಿಡಿಯೊಂದಿಗೆ, ರೈತರು ಜಮೀನಿನಲ್ಲಿ ಬೆಳೆಸಿದ ಜತೆಗೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದ ಕೃಷಿ ಚಟುವಟಿಕೆಗಳ ಮೂಲಕ ತಮ್ಮ ಆದಾಯವನ್ನು ಸುಸ್ಥಿರವಾಗಿ ಹೆಚ್ಚಿಸಿಕೊಳ್ಳಬಹುದು.