ನಮಸ್ಕಾರ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನಾಗರಿಕರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಕೆಲವೊಂದು ಯೋಜನೆಗಳು ತಾತ್ಕಾಲಿಕ ಆರ್ಥಿಕ ನೆರವನ್ನು ಒದಗಿಸಿದರೆ, ಇನ್ನು ಕೆಲವು ಯೋಜನೆಗಳು ನಾಗರಿಕರಿಗೆ ದೀರ್ಘಕಾಲಿಕ ಭದ್ರತೆಯನ್ನು ನೀಡಲು ಸಹಕರಿಸುತ್ತವೆ. ಅದೆಂತಹ ಮಹತ್ವದ ಯೋಜನೆಯೆಂದರೆ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ (PM Kisan Maandhan Yojana), ಇದು ರೈತರಿಗೆ ಮಾಸಿಕ ಪಿಂಚಣಿ ನೀಡಲು ಸಹಾಯಕವಾಗಿದೆ.
ಯೋಜನೆಯ ಪರಿಚಯ
ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಅನೇಕ ರೈತರು ಕೃಷಿ ಚಟುವಟಿಕೆಗಳ ಮೂಲಕ ತಮ್ಮ ಜೀವನೋಪಾಯವನ್ನು ಮುಂದುವರಿಸುತ್ತಿದ್ದಾರೆ. ಆದರೆ ಹವಾಮಾನ ವೈಪರಿತ್ಯ, ಬೆಲೆ ಅಸಮತೋಲನ ಮತ್ತು ಸಾಲದ ಭಾರದಿಂದ ಹಲವಾರು ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ನಿರಂತರ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ ಪರಿಚಯಿಸಲಾಗಿದೆ.
ಈ ಯೋಜನೆಡಿಯಲ್ಲಿ ರೈತರು ತಮ್ಮ ವಯೋಸಹಜ ಅವಧಿಗೆ ಬಂದು, ಕೃಷಿ ಕೆಲಸದ ಹೊಣೆಮಾರೆ ಇಳಿದ ನಂತರ, ಪ್ರತಿ ತಿಂಗಳು ₹3,000/- ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಯಾರು ಅರ್ಜಿ ಸಲ್ಲಿಸಬಹುದು?
ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಹತ್ವದ ಅರ್ಹತೆಗಳು ಇವೆ:
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ರೈತರಾಗಿರಬೇಕು.
- 20 ರಿಂದ 42 ವರ್ಷ ವಯಸ್ಸಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
- ರೈತರು ಮಾಸಿಕ ₹15,000/- ಗಿಂತ ಕಡಿಮೆ ಆದಾಯ ಹೊಂದಿರಬೇಕು.
- NPS, EPFO, ಅಥವಾ ESIC ನಲ್ಲಿ ಸಕ್ರಿಯ ಸದಸ್ಯರಿರುವವರು ಈ ಯೋಜನೆಗೆ ಅರ್ಹರಲ್ಲ.
ಪ್ರತಿ ತಿಂಗಳು ಹೂಡಿಕೆ ಮಾಡಬೇಕಾದ ಮೊತ್ತ:
ಈ ಯೋಜನೆಯಡಿ ರೈತರು ಪ್ರತಿ ತಿಂಗಳು ಕನಿಷ್ಠ ₹55 ರಿಂದ ₹200 ರೂಪಾಯಿಯವರೆಗೆ ಹೂಡಿಕೆ ಮಾಡಬೇಕು. ಈ ಮೊತ್ತವನ್ನು ಅವರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ರೈತರು ಪ್ರತಿ ತಿಂಗಳು ₹3,000 ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಬೇಕಾಗುವ ದಾಖಲೆಗಳು:
ಅರ್ಜಿಯನ್ನು ಸಲ್ಲಿಸಲು ಕೆಲವು ಅಗತ್ಯ ದಾಖಲಾತಿಗಳು ಅವಶ್ಯಕ:
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ರೇಷನ್ ಕಾರ್ಡ್ ಅಥವಾ ಶಾಶ್ವತ ನಿವಾಸದ ಪುರಾವೆ
- ಬ್ಯಾಂಕ್ ಪಾಸ್‌ಬುಕ್
- ಸಕ್ರಿಯ ಮೊಬೈಲ್ ಸಂಖ್ಯೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ರೈತರು ಈ ಯೋಜನೆಗೆ ಆನ್‌ಲೈನ್ ಮೂಲಕ ಅಥವಾ ಸಮೀಪದ CSC ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆ ರೈತರಿಗೆ ನಿರಂತರ ಆರ್ಥಿಕ ಭದ್ರತೆಯನ್ನು ಒದಗಿಸಲು ಮಾಡಲಾದ ಮಹತ್ವದ ಹೆಜ್ಜೆ.