ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ 39 ವಿವಿಧ ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ. ಇವು ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, ಆಕರ್ಷಕ ಸಂಬಳವನ್ನು ಹೊಂದಿರುತ್ತವೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಇತರ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ.

ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
---|---|
ಸನ್ನದು ಲೆಕ್ಕಪರಿಶೋಧಕರು (Charted Accountant) | 1 |
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) | 2 |
ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ) | 1 |
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ) | 1 |
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ) | 11 |
ಸಹಾಯಕರು | 8 |
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ) | 2 |
ಕಿರಿಯ ಸಹಾಯಕರು | 11 |
ಉಪಸಿಬ್ಬಂದಿ ಕಮ್ ವಾಹನ ಚಾಲಕ | 2 |
ವಿದ್ಯಾರ್ಹತೆಗಳು:
ಹುದ್ದೆ | ವಿದ್ಯಾರ್ಹತೆ | ಗರಿಷ್ಠ ವಯಸ್ಸು |
---|---|---|
ಸನ್ನದು ಲೆಕ್ಕಪರಿಶೋಧಕರು (Charted Accountant) | ಸಿಎ/ ಸಿಎಸ್ /ICWA. ಅನುಭವ ಹೊಂದಿರುವವರಿಗೆ ಆದ್ಯತೆ. | 35 ವರ್ಷ |
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) | ಕಾನೂನು ಪದವಿ ಜತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ. | 35 ವರ್ಷ |
ಮಾನವ ಸಂಪನ್ಮೂಲ ಅಧಿಕಾರಿ (ಎಂಬಿಎ, ಹೆಚ್.ಆರ್) | ಎಂಬಿಎ, ಹೆಚ್.ಆರ್ ಪದವಿ. | 35 ವರ್ಷ |
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ) | ಎಂಎ ಕನ್ನಡ ಅಥವಾ MSW ಪದವಿ. 3 ವರ್ಷ ಕನಿಷ್ಠ ಕಾರ್ಯಾನುಭವ. | 35 ವರ್ಷ |
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ) | ಯಾವುದೇ ಪದವಿ ಪಾಸ್. | 30 ವರ್ಷ |
ಸಹಾಯಕರು | ಯಾವುದೇ ಪದವಿ ಪಾಸ್, ಬಿಕಾಂ / ಬಿಬಿಎ ಪಾಸ್ ಮಾಡಿದವರಿಗೆ ಆದ್ಯತೆ, ಕಂಪ್ಯೂಟರ್ ಪರಿಣತಿ ಕಡ್ಡಾಯ. | 30 ವರ್ಷ |
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ) | ಯಾವುದೇ ಪದವಿ ಪಾಸ್, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೀಘ್ರ ಲಿಪಿ / ಬೆಳರಚ್ಚು ಪ್ರೌಢದರ್ಜೆಯಲ್ಲಿ ಪಾಸಾಗಿರಬೇಕು. | 30 ವರ್ಷ |
ಕಿರಿಯ ಸಹಾಯಕರು | ಪಿಯುಸಿ ತೇರ್ಗಡೆ, ಕಂಪ್ಯೂಟರ್ ಪರಿಣತಿ ಕಡ್ಡಾಯ. | 30 ವರ್ಷ |
ಉಪಸಿಬ್ಬಂದಿ ಕಮ್ ವಾಹನ ಚಾಲಕ | ಎಸ್ಎಸ್ಎಲ್ಸಿ ಪಾಸ್, ಡಿಎಲ್ ಹೊಂದಿರಬೇಕು, ಲಘುವಾಹನ ಚಾಲಕರಾಗಿ 3 ವರ್ಷ ಅನುಭವ. | 30 ವರ್ಷ |
ಮಾಸಿಕ ವೇತನ ವಿವರ:
ಹುದ್ದೆ | ಪ್ರಥಮ ವರ್ಷ ವೇತನ | ಎರಡನೇ ವರ್ಷ ವೇತನ |
---|---|---|
ಸನ್ನದು ಲೆಕ್ಕಪರಿಶೋಧಕರು (Charted Accountant) | ₹60,000 | ₹70,000 |
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) | ₹35,000 | ₹38,000 |
ಮಾನವ ಸಂಪನ್ಮೂಲ ಅಧಿಕಾರಿ (ಎಂಬಿಎ, ಹೆಚ್.ಆರ್) | ₹35,000 | ₹38,000 |
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ) | ₹35,000 | ₹38,000 |
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ) | ₹28,000 | ₹30,000 |
ಸಹಾಯಕರು | ₹20,000 | ₹22,000 |
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ) | ₹20,000 | ₹22,000 |
ಕಿರಿಯ ಸಹಾಯಕರು | ₹13,000 | ₹15,000 |
ಉಪಸಿಬ್ಬಂದಿ ಕಮ್ ವಾಹನ ಚಾಲಕ | ₹13,000 | ₹15,000 |
ಅರ್ಜಿಯ ಕುರಿತು ಮುಖ್ಯ ಮಾಹಿತಿಗಳು:
- ಅರ್ಜಿಯನ್ನು ಸಲ್ಲಿಸಲು ಕೊನೆ ದಿನಾಂಕ: 09-09-2024, ಸಂಜೆ 05:30 ಗಂಟೆಯೊಳಗೆ.
- ಅರ್ಜಿ ಶುಲ್ಕ:
- ಹುದ್ದೆ 1-5: ₹500
- ಹುದ್ದೆ 6-9: ₹300
- ಅರ್ಜಿಯನ್ನು ಕಳುಹಿಸಲು ವಿಳಾಸ:
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,
ಸೌಹಾರ್ದ ಸಹಕಾರಿ ಸೌಧ, ನಂ 68,
ಒಂದನೇ ಮಹಡಿ, 17 & 18ನೇ ಅಡ್ಡರಸ್ತೆ ಮಧ್ಯೆ,
ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು – 560055.
ಅರ್ಜಿಯ ವಿವರಗಳು ಮತ್ತು ಅಧಿಸೂಚನೆಗಾಗಿ:
ಅಧಿಕೃತ ವೆಬ್‌ಸೈಟ್ www.souhardha.coop ಗೆ ಭೇಟಿ ನೀಡಿ.
ನೇಮಕಾತಿ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಿ, ಮತ್ತು ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿ!
ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 080-23378375.
ಇ-ಮೇಲ್ ವಿಳಾಸ : soudarda@souharda.coop
- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 2000 ಹಣ ಈ ದಿನ ಬಿಡುಗಡೆ, ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ - June 25, 2025
- ಇ-ಹಾಜರಾತಿ ಕಡ್ಡಾಯ: ಶಾಲಾ ಮಕ್ಕಳಿಗೆ ನವೀನ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ! - June 25, 2025
- SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ..!! ಅರ್ಜಿ ಹೇಗೆ ಹಾಕಬೇಕು ಗೊತ್ತಾ? - June 25, 2025
Kiran murageppa khobri
Job