ದಾವಣಗೆರೆ ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಪ್ರವೇಶಾತಿಗಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಶ್ವವಿದ್ಯಾಲಯದ ವಿವಿಧ ಮುಖ್ಯ ಕೇಂದ್ರಗಳು, ಸ್ವಾಯತ್ತ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಈ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.
ವಿಶ್ವವಿದ್ಯಾಲಯದ ಮುಖ್ಯ ಕೇಂದ್ರ ಶಿವಗಂಗೋತ್ರಿ – ದಾವಣಗೆರೆ, ಸ್ನಾತಕೋತ್ತರ ಕೇಂದ್ರ – ಚಿತ್ರದುರ್ಗ, ಘಟಕ ಕಾಲೇಜುಗಳು, ಸ್ವಾಯತ್ತ ಕಾಲೇಜುಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಈಗ ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು, ಪಿಜಿ ಡಿಪ್ಲೊಮ, ಡಿಪ್ಲೊಮ ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.
- ಕೋರ್ಸ್ಗಳು: ವಿಶ್ವವಿದ್ಯಾಲಯವು ಕಲಾ, ವಾಣಿಜ್ಯ, ನಿರ್ವಹಣಾಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮ, ಡಿಪ್ಲೊಮ, ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗಾಗಿ ಅರ್ಜಿ ಆಹ್ವಾನಿಸಿದೆ.
- ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆರಂಭದ ದಿನ: 26 ಆಗಸ್ಟ್ 2024
- ಕೊನೆ ದಿನಾಂಕ:27
ವಿದ್ಯಾರ್ಥಿಗಳಿಗೆ ಲಭ್ಯವಿರುವ ಕೋರ್ಸ್ಗಳು:
ಕಲಾ ವಿಭಾಗ:
- ಎಂಎ: ಕನ್ನಡ, ಇಂಗ್ಲಿಷ್, ಉರ್ದು, ಅಪರಾಧಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಮತ್ತು ಎಂಎಸ್ಡಬ್ಲ್ಯೂ.
- ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್: ಆಪ್ಲೈಡ್ ಆರ್ಟ್ ಮತ್ತು ಪೇಂಟಿಗ್.
ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ:
- ಎಂಕಾಂ
- ಎಂಬಿಎ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಿಜಿಸಿಇಟಿ ಮೂಲಕ ಅಥವಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಮೂಲಕ.
ವಿಜ್ಞಾನ ಮತ್ತು ತಂತ್ರಜ್ಞಾನ:
- ಎಂಎಸ್ಸಿ: ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ಪರಿಸರ ವಿಜ್ಞಾನ, ಫ್ಯಾಷನ್ ಡಿಸೈನ್, ಆಹಾರ ತಂತ್ರಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಯೋಗ ವಿಜ್ಞಾನ, ಪ್ರಾಣಿಶಾಸ್ತ್ರ.
- ಎಂಸಿಎ: ಪಿಜಿಸಿಇಟಿ ಅಥವಾ ವಿವಿ ಪ್ರವೇಶ ಪರೀಕ್ಷೆ ಮೂಲಕ.
ಪಿಜಿ ಡಿಪ್ಲೊಮ, ಡಿಪ್ಲೊಮ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು:
- ಪಿಜಿ ಡಿಪ್ಲೊಮ ಇನ್ ಸೈಬರ್ ಸೆಕ್ಯೂರಿಟಿ, ಫೈನಾನ್ಸಿಯಲ್ ಸರ್ವೀಸ್, ಡಾಟಾ ಅನಾಲಿಸಿಸ್, ಫುಡ್ ಪ್ರೊಸೆಸಿಂಗ್, ಸೇಫ್ಟಿ ಅಂಡ್ ಕ್ವಾಲಿಟಿ ಮ್ಯಾನೇಜ್ಮೆಂಟ್ (ಆಹಾರ ತಂತ್ರಜ್ಞಾನ ಅಧ್ಯಯನ ವಿಭಾಗ), ಯೋಗ ವಿಜ್ಞಾನ, ಮೂರು ತಿಂಗಳ ಸರ್ಟಿಫಿಕೆಟ್ ಕಾರ್ಯಕ್ರಮ.
- ಕಲಾ – ಎಂಎ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಎಂಎಸ್ಡಬ್ಲ್ಯೂ (ಸಮಾಜ ಕಾರ್ಯ).
ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ – ಎಂ.ಕಾಂ.
ವಿಜ್ಞಾನ ಮತ್ತು ತಂತ್ರಜ್ಞಾನ – ಎಂಎಸ್ಸಿ ಸಸ್ಯಶಾಸ್ತ್ರ, ರಸಾಯಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ.
ಅರ್ಜಿ, ಪ್ರವೇಶ ಪರೀಕ್ಷಾ ಶುಲ್ಕದ ವಿವರ
- ಸಾಮಾನ್ಯ / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ.500.
- ಶುಲ್ಕ ಪಾವತಿಯನ್ನು ಚಲನ್ ಮೂಲಕ (ಆಫ್ಲೈನ್) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಶ್ವವಿದ್ಯಾಲಯ ಖಾತೆ ಸಂಖ್ಯೆ – 64050447113, IFSC Code – SBIN0040869, ಶಾಖೆಗೆ ಸಂದಾಯವಾಗುವಂತೆ ಪಾವತಿಸಬಹುದು. ಅಥವಾ ಹಣಕಾಸು ಅಧಿಕಾರಿಗಳು, ದಾವಣಗೆರೆ ವಿವಿ, ಶಿವಗಂಗೋತ್ರಿ – ಇವರ ಹೆಸರಿನಲ್ಲಿ ಡಿಡಿ ಮೂಲಕ ಪಾವತಿಸುವುದು.
ಮೇಲಿನ ಕೇಂದ್ರಗಳಲ್ಲಿ ಮೇಲಿನ ವಿಷಯಗಳ ಜತೆಗೆ ವಿವಿಯ ಸ್ವಾಯತ್ತ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ನಡೆಸುತ್ತಿರುವ ಸ್ನಾತಕೋತ್ತರ ಕೋರ್ಸ್ಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಈ ಕಾಲೇಜುಗಳಲ್ಲಿ ವಿಷಯಗಳನ್ನು ತಿಳಿಯಲು ವಿವಿ ವೆಬ್ಸೈಟ್ಗೆ ಭೇಟಿ ನೀಡಿ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಬಹುದು.
ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಹಾಗೂ ಸಂದರ್ಶನ ಪ್ರಕ್ರಿಯೆಯ ವಿವರಗಳು
- ಅರ್ಜಿ ವಿತರಣೆ ಹಾಗೂ ಸಲ್ಲಿಸಲು ಪ್ರಾರಂಭದ ದಿನಾಂಕ : 26-08-2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-09-2024
- ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿ : 03-10-2024 ರಿಂದ 05-10-2024 ರವರೆಗೆ.
- ವಿಷಯವಾರು ಪ್ರವೇಶ ಪರೀಕ್ಷೆ ವೇಳಾಪಟ್ಟಿ ಚೆಕ್ ಮಾಡಲು ವೆಬ್ಸೈಟ್ ವಿಳಾಸ : www.davanagereuniversity.ac.in
- ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಪ್ರಕಟಣೆ ದಿನಾಂಕ : 09-10-2024 ಮತ್ತು 10-10-2024
ಕೇಂದ್ರಿಕೃತ ಸಂದರ್ಶನ, ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಮತ್ತು ತರಗತಿಗಳ ಪ್ರಾರಂಭ ದಿನಾಂಕಗಳು
- ಮೊದಲನೇ ಸುತ್ತಿನ ಪ್ರವೇಶಾತಿ – ಮೆರಿಟ್ ಸೀಟುಗಳು, ಸ್ಪೆಷಲ್ ಕ್ಯಾಟಗರಿ ಸೀಟುಗಳು ಹಾಗೂ ವರ್ಧಿತ ಶುಲ್ಕಗಳ ಸೀಟುಗಳು – ಅಕ್ಟೋಬರ್ 14 – 16, 2024 ವರೆಗೆ.
- ಎರಡನೇ ಸುತ್ತಿನ ಪ್ರವೇಶಾತಿ (ಉಳಿಕೆ ಸೀಟುಗಳಿಗೆ) – ಅಕ್ಟೋಬರ್ 18-19, 2024 ವರೆಗೆ.
- ಮೂರನೇ ಸುತ್ತಿನ ಪ್ರವೇಶಾತಿ (ಉಳಿಕೆ ಸೀಟುಗಳಿಗೆ) – 21-10-2024
- ತರಗತಿ ಪ್ರಾರಂಭ ದಿನಾಂಕ – 21-10-2024
ಅರ್ಜಿ ಪ್ರಕ್ರಿಯೆ, ಪ್ರವೇಶ ಪರೀಕ್ಷೆ ಕುರಿತ ಇತರೆ ಪ್ರಮುಖ ಸೂಚನೆಗಳು
- ವಿವಿಯ ವಿವಿಧ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಬಯಸುವ ಅರ್ಹರು ವಿಷಯವಾರು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸತಕ್ಕದ್ದು. ಪ್ರತಿ ಪದವಿಗೆ ಪ್ರತ್ಯೇಕ ಅರ್ಜಿಗಳ ಪರಿಶೀಲನೆ ಮತ್ತು ಪ್ರವೇಶ ಪರೀಕ್ಷಾ ಶುಲ್ಕಗಳನ್ನು ಪಾವತಿಸತಕ್ಕದ್ದು.
- ಭರ್ತಿ ಮಾಡಿದ ಪ್ರವೇಶಾತಿ ಅರ್ಜಿ ಹಾಗೂ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯೊಂದಿಗೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಆಯಾ ವಿಭಾಗದ ಅಧ್ಯಕ್ಷರು / ಸಂಯೋಜನಾಧಿಕಾರಿಗಳ ಕಚೇರಿಗೆ ವೈಯಕ್ತಿಕವಾಗಿ ಸಲ್ಲಿಸುವುದು ಅಥವಾ ಆಯಾ ವಿಭಾಗಕ್ಕೆ ಅಂಚೆ ಮೂಲಕ ಕಳುಹಿಸುವುದು.
- ಪ್ರವೇಶಾತಿ ಬಯಸುವವರು ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ವಿಭಾಗಗಳ ಕಚೇರಿಗೆ ಸಲ್ಲಿಸಿದ ನಂತರ ಪ್ರವೇಶ ಪತ್ರವನ್ನು ತಪ್ಪದೇ ಪಡೆಯತಕ್ಕದ್ದು.
- ಅಂಚೆ ಮೂಲಕ ಅರ್ಜಿಗಳನ್ನು ಕಳುಹಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಸಂಬಂಧಪಟ್ಟ ವಿಭಾಗದ ಕಚೇರಿಯಲ್ಲಿ ವೈಯಕ್ತಿಕವಾಗಿ ಪ್ರವೇಶ ಪರೀಕ್ಷೆ ದಿನಾಂಕಕ್ಕಿಂತ ಮೊದಲು ಪಡೆಯಬೇಕು.
- ಪ್ರವೇಶಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ತರಗತಿಗಳು ಪ್ರಾರಂಭವಾಗಲಿವೆ.
- ಸ್ನಾತಕೋತ್ತರ ಪದವಿ ಪ್ರವೇಶಾತಿ / ಶುಲ್ಕ ಹಾಗೂ ಇತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿವಿ ವೆಬ್ಸೈಟ್ನಲ್ಲಿ ಮಾಹಿತಿ ಪುಸ್ತಕ ನೋಡಿಕೊಳ್ಳಬಹುದು.
ವಿಶ್ವವಿದ್ಯಾಲಯದ ಸ್ವಾಯತ್ತ ಮತ್ತು ಸಂಯೋಜಿತ ಕಾಲೇಜುಗಳು:
ದಾವಣಗೆರೆ ವಿಶ್ವವಿದ್ಯಾಲಯವು ತನ್ನ ಸ್ವಾಯತ್ತ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಸ್ತುತಪಡಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳಿಗೆ ಸಂಬಂಧಿಸಿದಂತೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಮತ್ತು ಪ್ರವೇಶಾತಿಯ ಸಂಪೂರ್ಣ ವಿವರಗಳು:
ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.davanagereuniversity ನಲ್ಲಿ ಲಭ್ಯವಿದೆ.