ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ರೋಚಕ ಸುದ್ದಿ! ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಪ್ಮರ್) ವಿವಿಧ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇಮಕಾತಿ ಚಾಲನೆಯನ್ನು ಪ್ರಕಟಿಸಿದೆ. ಭಾರತದ ಪ್ರಮುಖ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಬಯಸುವ ವ್ಯಕ್ತಿಗಳಿಗೆ ಇದು ಅದ್ಭುತ ಅವಕಾಶವಾಗಿದೆ.
Table of Contents
JIPMER ಬಗ್ಗೆ
ಪುದುಚೇರಿಯಲ್ಲಿರುವ ಜಿಪ್ಮರ್, ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಸುಧಾರಿತ ಆರೋಗ್ಯ ಸೇವೆಗಳು ಮತ್ತು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ನೀಡುತ್ತದೆ. JIPMER ನಲ್ಲಿ ಕೆಲಸ ಮಾಡುವುದರಿಂದ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮಾತ್ರವಲ್ಲದೆ ಶ್ರೇಷ್ಠತೆಯ ಪರಂಪರೆಯೊಂದಿಗೆ ಪ್ರತಿಷ್ಠಿತ ಸಂಸ್ಥೆಯ ಭಾಗವಾಗಲು ಅವಕಾಶವನ್ನು ಒದಗಿಸುತ್ತದೆ.
ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್‌ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ವಿವಿಧ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. ನರ್ಸಿಂಗ್ ಆಫೀಸರ್, ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್, ಫಾರ್ಮಾಸಿಸ್ಟ್, ಇತರೆ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ. ಹುದ್ದೆಗಳ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಗ್ರೂಪ್ ಬಿ ಹುದ್ದೆಗಳ ವಿವರ
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಕಿರಿಯ ಭಾಷಾಂತರ ಅಧಿಕಾರಿ | 1 |
ಜೂನಿಯರ್ ಆಕ್ಯೂಪೇಷನಲ್ ಥೆರಪಿಸ್ಟ್ | 1 |
ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ | 4 |
ನರ್ಸಿಂಗ್ ಆಫೀಸರ್ | 154 |
ಟ್ಯೂಟರ್ ಇನ್ ಸ್ಪೀಚ್ ಪೆಥಾಲಜಿ ಅಂಡ್ ಆಡಿಯೋಲಜಿ | 1 |
ಎಕ್ಸ್-ರೇ ಟೆಕ್ನೀಷಿಯನ್ (ರೇಡಿಯೋಥೆರಪಿ) | 1 |
ಎಕ್ಸ್-ರೇ ಟೆಕ್ನೀಷಿಯನ್ (ರೆಡಿಯೋಡಯಾಗ್ನೋಸಿಸ್) | 5 |
ಟೆಕ್ನಿಕಲ್ ಅಸಿಸ್ಟಂಟ್ (ನ್ಯೂಕ್ಲಿಯರ್ ಮೆಡಿಸನ್) | 1 |
ಟೆಕ್ನಿಕಲ್ ಅಸಿಸ್ಟಂಟ್ ಇಲೆಕ್ಟ್ರಾನಿಕ್ಸ್ (ಸೈಕಾಲಜಿ) | 1 |
ಗ್ರೂಪ್ ಸಿ ಹುದ್ದೆಗಳ ವಿವರ
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಅನಸ್ತೇಸಿಯಾ ಟೆಕ್ನೀಷಿಯನ್ | 1 |
ಆಡಿಯೋಲಜಿ ಟೆಕ್ನೀಷಿಯನ್ | 1 |
ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್ | 24 |
ಫಾರ್ಮಾಸಿಸ್ಟ್ | 6 |
ರೆಸ್ಪಿರೇಟರಿ ಲ್ಯಾಬೋರೇಟರಿ ಟೆಕ್ನೀಷಿಯನ್ | 2 |
ಸ್ಟೆನೋಗ್ರಾಫರ್ ಗ್ರೇಡ್ 2 | 1 |
ಕಾರ್ಡಿಯೋಗ್ರಾಫಿಕ್ ಟೆಕ್ನೀಷಿಯನ್ | 05 |
ವಯಸ್ಸಿನ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆದರೆ ಗರಿಷ್ಠ ವಯಸ್ಸಿನ ಮಿತಿಯನ್ನು ಒಂದೊಂದು ಹುದ್ದೆಗೆ ಒಂದೊಂದು ರೀತಿ ನಿಗದಿ ಮಾಡಿದ್ದು, ಈ ಕುರಿತು ತಿಳಿಯಲು ಅಧಿಸೂಚನೆ ಓದಿರಿ. ನಂತರ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿ / ಎಂಬಿಬಿಎಸ್ / ನರ್ಸಿಂಗ್ ಪದವಿ / ಡಿಪ್ಲೊಮ / ಬಿಎಸ್ಸಿ ಪದವಿ / ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 19-07-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19-08-2024 ರ ಸಂಜೆ 04-30 ಗಂಟೆವರೆಗೆ.
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಆರಂಭಿಕ ದಿನಾಂಕ : 02-09-2024
ಆನ್‌ಲೈನ್ ಲಿಖಿತ ಪರೀಕ್ಷೆ ದಿನಾಂಕ : 14-09-2024
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ವರ್ಗ / ಆರ್ಥಿಕವಾಗಿ ಹಿಂದುಳಿದ ವರ್ಗ / ಇತರೆ ಹಿಂದುಳಿದ ವರ್ಗದವರಿಗೆ ರೂ.1500.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.1,200.
PwD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್/ ಯುಪಿಐ ಮೂಲಕ ಪಾವತಿ ಮಾಡಬಹುದು.
ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್‌ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://cdn.digialm.com/EForms/configuredHtml/827/89979/Registration.html
ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್‌ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ನ ಈ ಮೇಲಿನ ವಿವಿಧ ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿ ತಿಳಿಯಲು ಹಾಗೂ ಅಧಿಸೂಚನೆ ಓದಲು https://jipmer.edu.in/ ಗೆ ಭೇಟಿ ನೀಡಿರಿ.
ಈ ಹುದ್ದೆಗಳಿಗೆ ಆನ್‌ಲೈನ್ ಆಧಾರಿತ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ.
Great post! I’m looking forward to reading more of your work.