ಕೇಂದ್ರ ಸರ್ಕಾರವು ಆರ್ಥಿಕವಾಗಿ ಬಡವಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡಲು ಹೊಸದಾಗಿ ಪ್ರಾರಂಭಿಸಿರುವ ಪಿಎಂ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಯೋಜನೆಯ ಉದ್ದೇಶವು ಬಡ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡುವುದೇ ಆಗಿದ್ದು, ಅವರ ಕನಸುಗಳನ್ನು ನನಸು ಮಾಡಲು ನೆರವಾಗಲಿದೆ.

ಯೋಜನೆಯ ವಿವರಗಳು: ಈ ಸ್ಕಾಲರ್ಶಿಪ್ ಯೋಜನೆ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಮತ್ತು ಮುಂದುವರಿದ ಪದವಿ ಹಾಗೂ ಮಾಸ್ಟರ್ಸ್ ತರಗತಿಗಳಿಗೆ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಬೋರ್ಡ್ ಎಕ್ಸಾಮ್‌ನಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಅವರಾ ಮಾರ್ಕ್ಸ್‌ಅನುಸಾರವಾಗಿ ಈ ಸ್ಕಾಲರ್ಶಿಪ್ ನೀಡಲಾಗುವುದು.
ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ?
- ಪ್ರತಿ ವರ್ಷ ₹82,000 ವರೆಗೆ ವಿದ್ಯಾರ್ಥಿವೇತನ ಸಿಗುತ್ತದೆ.
- ಈ ಸ್ಕಾಲರ್ಶಿಪ್‌ನಲ್ಲಿನ 50% ಮೀಸಲು ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿದೆ, ಇದು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಪ್ರಸ್ತಾಪಿತವಾಗಿದೆ.
- 18 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳು, ಅವರು ಪ್ರಸ್ತುತ ಅಧ್ಯಯನ ಮಾಡುತ್ತಿರುವ ರಾಜ್ಯದ ಜನಸಂಖ್ಯೆಯ ಅನುಸಾರ ಈ ಸ್ಕಾಲರ್ಶಿಪ್‌ಗಾಗಿ ಅರ್ಜಿ ಹಾಕಬಹುದು.
ಅರ್ಹತೆಗಳು:
- ಅರ್ಜಿ ಹಾಕುವ ವಿದ್ಯಾರ್ಥಿಯು 12ನೇ ತರಗತಿಯಲ್ಲಿ 50% ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಿರಬೇಕು.
- ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಲೇಜು ಅಥವಾ ಸಂಸ್ಥೆಗಳಲ್ಲಿ ಪದವಿ ಓದುತ್ತಿರುವವರು ಮಾತ್ರ ಈ ಸ್ಕಾಲರ್ಶಿಪ್‌ಗಾಗಿ ಅರ್ಹರು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ಸ್ಕಾಲರ್ಶಿಪ್‌ಗಾಗಿ ಅರ್ಜಿ ಹಾಕುವವರು ಪ್ರಸ್ತುತ ಬೇರೆ ಯಾವುದೇ ಸ್ಕಾಲರ್ಶಿಪ್ ಪಡೆಯುತ್ತಿರಬಾರದು.
ನೇರವಾಗಿ ಸಿಗಲಿದೆ ಸ್ಕಾಲರ್ಶಿಪ್: ವಿದ್ಯಾರ್ಥಿವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ, ಇದು ಸಂಪೂರ್ಣವಾಗಿ ಕೇಂದ್ರೀಕೃತವಾದ ಕ್ರಮವಾಗಿದೆ. ಈ ಮೂಲಕ ಯಾವುದೇ ಮಧ್ಯವರ್ತಿಗಳು ಇಲ್ಲದಂತೆ, ಸರಳ ಹಾಗೂ ಸುಲಭವಾಗಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಮೊತ್ತವನ್ನು ಪಡೆಯಬಹುದು.
ನಿಯಮಗಳು:
- ವಿದ್ಯಾರ್ಥಿಯು ಎಕ್ಸಾಮ್‌ಗಳಲ್ಲಿ 50% ಗಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿರಬೇಕು.
- ಅಟೆಂಡೆನ್ಸ್ 75% ಕ್ಕಿಂತ ಕಡಿಮೆ ಇರಬಾರದು.
- ವಿದ್ಯಾರ್ಥಿಯು ಯಾವುದೇ ಕ್ರಿಮಿನಲ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದರೆ ಸ್ಕಾಲರ್ಶಿಪ್ ಅನ್ನು ರದ್ದುಪಡಿಸಲಾಗುತ್ತದೆ.
ಈ ಸ್ಕಾಲರ್ಶಿಪ್ ಯೋಜನೆ, ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಪ್ರಮುಖ ನೆರವನ್ನು ಒದಗಿಸಲಿದೆ. ಅವರ ವಿದ್ಯಾಭ್ಯಾಸವನ್ನು ಮುಂದುವರೆಸಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಲು ಇದು ಸಹಾಯಕಾರಿಯಾಗಲಿದೆ.
I want this scholarship
It’s very helpful
Yes
Sir help
This post really resonated with me. Keep up the good work.